Saturday, June 13, 2026
spot_imgspot_img
spot_imgspot_img

ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ವೃದ್ಧರು

- Advertisement -
- Advertisement -

ನಾಲ್ಕು ವರ್ಷದ ಮಗುವಿಗೆ ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿದ್ದ ಬಾಲಕನನ್ನು ವೃದ್ಧರು ರಕ್ಷಿಸಿದ ಘಟನೆ ವಾರಾಣಾಸಿಯ ಬನಾರಸ್ ನಗರದಲ್ಲಿ ನಡೆದಿದೆ.

ವಾರಾಣಾಸಿಯ ಬನಾರಸ್ ನಗರದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ನಾಲ್ಕು ವರ್ಷದ ಕಾರ್ತಿಕ್ ಮಳೆ ನಿಂತ ನಂತರ ನೀರಿನಲ್ಲಿ ಆಟವಾಡುತ್ತಿದ್ದ. ಮನೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ನೀರಿನ ಮೂಲಕ ಪ್ರವಹಿಸಿತ್ತು. ಕಾರ್ತಿಕ್​ಗೆ ವಿದ್ಯುತ್ ತಗುಲಿದ ನಂತರ ಕಿರುಚುತ್ತಾ ಗೋಳಾಡುತ್ತಿದ್ದ ಅಷ್ಟರಲ್ಲಿ ಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಹಿರಿಯರಲ್ಲಿ ಒಬ್ಬರು ನೆಲದ ಮೇಲೆ ಬಿದ್ದು ಅಳುತ್ತಿದ್ದ ಬಾಲಕನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ.ಆಗ ಅವರಿಗೆ ವಿದ್ಯುತ್ ತಗುಲಿದ್ದು,ಬಳಿಕ ಮರದ ಕೋಲಿನ ಸಹಾಯದಿಂದ ಬಾಲಕನನ್ನು ಕಾಪಾಡಿದ್ದಾರೆ.

ಈ ಸಂಪೂರ್ಣ ಘಟನೆಯು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು,ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಹಿರಿಯರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

- Advertisement -

Related news

error: Content is protected !!