Thursday, May 16, 2024
spot_imgspot_img
spot_imgspot_img

‘ಘನ ತ್ಯಾಜ್ಯ ಘಟಕಕ್ಕೆ ಅಳವಡಿಸಿದ ಹಳೆ ಶಟರ್‌ ದುರುಪಯೋಗ ಆಗಿಲ್ಲ,ಮಹಿಳೆಯಾಗಿ ನನ್ನನ್ನು ಕುಗ್ಗಿಸುವ ಪ್ರಯತ್ನ ನಡೀತಿದೆ’: ಗ್ರಾ ಪಂ ಅಧ್ಯಕ್ಷೆ ನೆಫೀಸಾ ಕಡೆಂಬಿಲ ಸ್ಪಷ್ಟನೆ

- Advertisement -G L Acharya panikkar
- Advertisement -

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕಡೆಂಬಿಲ ಎಂಬಲ್ಲಿ ಗ್ರಾಮ ಪಂಚಾಯತ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘನ ತ್ಯಾಜ್ಯ ಘಟಕದ ಹಳೆ ಶಟರ್‌ ಕಾಣೆಯಾಗಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮೇಲೆ ನೇರ ಆರೋಪದ ಬಗ್ಗೆ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾ ಕಡೆಂಬಿಲ ಸ್ಪಷ್ಟನೆ ನೀಡಿದ್ದಾರೆ.

‘ಘನ ತ್ಯಾಜ್ಯ ಘಟಕಕ್ಕೆ ಅಳವಡಿಸಿದ ಹಳೆ ಶಟರ್‌ ಕಾಣೆಯಾಗಿಲ್ಲ, ಅದು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇದೆ. ಈ ಶಟರ್ ನ್ನು ಗ್ರಾಮ ಪಂಚಾಯತ್ ಹಾಗೂ ವೈಯುಕ್ತಿಕವಾಗಿ ನಾನು ಯಾವುದೇ ರೀತಿಯ ದುರುಪಯೋಗ ಮಾಡಿಲ್ಲ. ಹಳೆ ಶಟರ್ ಬಗ್ಗೆ ಎಲ್ಲಾ ಸಾಕ್ಷಿ ಆಧಾರಗಳು ನಮ್ಮಲ್ಲಿ ಇದೆ. ನಾನು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಇಂದು ಮಹಿಳಾ ಕಾಂಗ್ರೆಸ್‌ನ ದ.ಕ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಗೊಂಡಿರುವ ಕಾರಣ ಮಹಿಳೆಯಾಗಿ ನನ್ನನ್ನು ಕುಗ್ಗಿಸುವ ಕೆಲಸ ನಡೀತಾ ಇದೆ. ಇಲ್ಲ ಸಲ್ಲದ ಆರೋಪಗಳಿಗೆ ನಾನು ಜಗ್ಗುವುದಿಲ್ಲ. ಗ್ರಾಮಸ್ಥರು ಯಾವುದೇ ರೀತಿಯ ಸುಳ್ಳು ಉಹಾ ಪೋಹಗಳಿಗೆ ತಲೆ ಕೊಡಬೇಡಿ ನಿಮ್ಮ ಜೊತೆ ನಾನು ಸಾದಾ ಇದ್ದೇನೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾ ಕಡೆಂಬಿಲ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!