Sunday, April 28, 2024
spot_imgspot_img
spot_imgspot_img

ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋದ ಪೋಷಕರು..!!

- Advertisement -G L Acharya panikkar
- Advertisement -

ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಬೆಳಗ್ಗೆ ತಾನೆ ಹುಟ್ಟಿದ ಇನ್ನೂ ಕಣ್ಣನ್ನು ಬಿಡದ ನವಜಾತ ಶಿಶುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಣ್ಣು ಮಗು ಎಂದು ನವಜಾತ ಶಿಶುವನ್ನು ಮುಳ್ಳಿನಲ್ಲಿ ಎಸೆದು ಹೋಗಿದ್ದಾರೆ. ಬೆಳಗಿನ ಜಾವ ನವಜಾತ ಶಿಶು ಅಳುವುದನ್ನು ಕಂಡ ಸ್ಥಳೀಯರು, ರಕ್ಷಣೆ ಮಾಡಿ ಆರೈಕೆ ಮಾಡಿದ್ದಾರೆ.

ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ. ನಂತರ, ಸ್ಥಳೀಯ ಮಹಿಳೆಯರು ಮಗುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಗತಿನಗರ ಗ್ರಾಮದ ಗಂಗಮ್ಮ ಎನ್ನುವವರ ಮನೆಯಲ್ಲಿ ಮಗು ಆರೈಕೆ ಆಗುತ್ತಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

- Advertisement -

Related news

error: Content is protected !!