Monday, June 30, 2025
spot_imgspot_img
spot_imgspot_img

ಪಿಕಪ್‌ ವಾಹನ ಪಲ್ಟಿ; ಓರ್ವ ಮಹಿಳೆ ಮೃತ್ಯು, 20 ಜನರು ಗಾಯ..!

- Advertisement -
- Advertisement -

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೋ ಪಿಕಪ್‌ ವಾಹನ ಪಲ್ಟಿ ಹೊಡೆದು ಒರ್ವ ಮಹಿಳೆ ಮೃತಪಟ್ಟಿದ್ದು, 20 ಜನರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸದಬ ಗ್ರಾಮದ ಅಗತೀರ್ಥ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟ ಮಹಿಳೆ ಲಕ್ಷ್ಮಿ ನಗನೂರು (38) ಎಂದು ಗುರುತಿಸಲಾಗಿದೆ.

ಸಂಚಾರಿ ನಿಯಮವನ್ನು ಉಲ್ಲಂಘಿಸಿ, ಬೊಲೆರೋ ಪಿಕಪ್‌ ವಾಹನವು 40 ಕಲ್ಲದೇವನಹಳ್ಳಿಯಿಂದ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕಾರ್ಮಿಕ ಮಹಿಳೆ ಮೃತಪಟ್ಟರೆ, 20 ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿದ್ದಾರೆ. ಕಲ್ಲದೇವನಹಳ್ಳಿಯಿಂದ ಯಾಳಗಿ ಗ್ರಾಮಕ್ಕೆ ಕೂಲಿ ಕೆಲಸ ಮಾಡಲು ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಗಾಯಾಳುಗಳನ್ನು ಹುಣಸಗಿ ಹಾಗೂ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ತಿಳಿದ ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!