Sunday, June 29, 2025
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಜೋಡಿ..!

- Advertisement -
- Advertisement -

ಸಲಿಂಗಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಜಯಶ್ರೀ ರಾಹುಲ್‌ 28 ಹಾಗೂ 23 ವರ್ಷದ ರಾಕಿ ದಾಸ್ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಮಹಿಳಾ ಸಲಿಂಗಿ ಜೋಡಿಯೊಂದು ಉತ್ತರ ಪ್ರದೇಶದ ದೇಗುಲವೊಂದರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಈ ಅಪರೂಪದ ಮದುವೆ ನಡೆದಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯವರಾದ ಇವರು ದಿಯೋರಿಯಾದಲ್ಲಿ ಆರ್ಕೆಸ್ಟ್ರಾದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ವೇಳೆ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ.9 ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿದ್ದ ಇವರು ಮದುವೆಯಾಗಲು ನಿರ್ಧರಿಸಿದ್ದು, ನೋಟರೈಸ್ ಮೂಲಕ ಅಫಿಡವಿಟ್ ಪಡೆದು ತಮ್ಮ ವಿವಾಹದ ಸಂಬಂಧವನ್ನು ಔಪಚಾರಿಕಗೊಳಿಸಿದ್ದಾರೆ. ದಿಯೋರಿಯಾದ ಭಾತ್ಪರ್ ರಾಣಿಯಲ್ಲಿರುವ ಭಗದಾ ಭವಾನಿ ದೇವಸ್ಥಾನದಲ್ಲಿ ನಡೆದ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

ಈ ಜೋಡಿ ಕೆಲಸ ಮಾಡುತ್ತಿದ್ದ ಆರ್ಕೆಸ್ಟ್ರಾದ ಮಾಲೀಕ ಮುನ್ನಾ ಪಾಲ್ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಇಬ್ಬರು ಹುಡುಗಿಯರು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯವರಾಗಿದ್ದು, ದಿಯೋರಿಯಾದ ಲಾರ್ ಪ್ರದೇಶದಲ್ಲಿರುವ ತಮ್ಮ ಆರ್ಕೆಸ್ಟ್ರಾದ ಪ್ರಮುಖ ಭಾಗವಾಗಿದ್ದಾರೆ ಎಂದು ಮುನ್ನಾ ಪಾಲ್ ಹೇಳಿಕೊಂಡಿದ್ದಾರೆ. ಇವರ ಈ ಲವ್ ಸ್ಟೋರಿ ಬಗ್ಗೆ ಅವರ ಕುಟುಂಬ ಸದಸ್ಯರಿಗೂ ಅರಿವಿತ್ತು ಹೀಗಾಗಿ ಜೋಡಿ ಈಗ ದೇವಸ್ಥಾನದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

- Advertisement -

Related news

error: Content is protected !!