Monday, May 20, 2024
spot_imgspot_img
spot_imgspot_img

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ – ಪೋಕ್ಸೋ ಪ್ರಕರಣದಡಿ ಆರೋಪಿಯ ಬಂಧನ

- Advertisement -G L Acharya panikkar
- Advertisement -
vtv vitla
vtv vitla

ಪುತ್ತೂರು: ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಸುಳ್ಯ ಐವರ್ನಾಡಿನ ಯುವಕನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಸುಳ್ಯ ಐವರ್ನಾಡು ನಿವಾಸಿ ರಕ್ಷಿತ್ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾದ ಆರೋಪಿ. ಅಪ್ರಾಪ್ತ ಬಾಲಕಿ ಪುತ್ತೂರು ಹಾಸ್ಟೇಲ್ ನಿಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಈ ನಡುವೆ ರಕ್ಷಿತ್‌ ಪ್ರೀತಿಸುತಿರುವ ಕುರಿತು ಮಾಹಿತಿ ಪಡೆದು ಬಾಲಕಿಯ ಮನೆಯವರು ಆತನಿಗೆ ಬುದ್ದಿವಾದ ಹೇಳಿದ್ದರು. ಅಲ್ಲದೆ ಬಾಲಕಿಯ ತಂದೆ ರಕ್ಷಿತ್‌ ನ ವಿರುದ್ದ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

ಆ ಬಳಿಕವೂ ರಕ್ಷಿತ್‌ ಪುತ್ತೂರು ಹಾಸ್ಟೇಲ್ ವಾರ್ಡನ್ ಗೆ ಬಾಲಕಿಯ ಅಣ್ಣನೆಂದು ತಿಳಿಸಿ ಬಾಲಕಿಗೆ ಪೋನ್‌ ಕೊಡಲು ಹೇಳಿ ಮಾತನಾಡಿ ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ವಿರೋಧಿಸಿದಾಗ, ನೀನು ಬಾರದೇ ಇದ್ದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿ ದಿನಾಂಕ ಫೆ.27ರಂದು ಬೀರಮಲೆಗುಡ್ಡೆಗೆ ಬರುವುದಾಗಿ ಹೇಳಿ ಅಲ್ಲಿ ಲೈಂಗಿಕ‌ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಕುರಿತು ಸಂತ್ರಸ್ಥೆ ನೀಡಿದ ದೂರಿನಂತೆ ಮಹಿಳಾ ಪೊಲೀಸರು ರಕ್ಷಿತ್ ವಿರುದ್ಧ ಸೆಕ್ಷನ್ 354 ಎ, 506 ಐಪಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!