Friday, May 3, 2024
spot_imgspot_img
spot_imgspot_img

ಕಡಲೇಹಿಟ್ಟಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು..!

- Advertisement -G L Acharya panikkar
- Advertisement -

ನಮ್ಮ ಹಿರಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮನೆಯಲ್ಲಿಯೇ ದೊರೆಯುತ್ತಿದ್ದ ಕೆಲವು ವಿಶೇಷವಾದ ಪದಾರ್ಥಗಳನ್ನು ಬಳಸುತ್ತಿದ್ದರು. ಇಂದಿನ ಕಾಲದಂತೆ ಯಾವುದೇ ರೀತಿಯ ಚರ್ಮ ಸಮಸ್ಯೆಯನ್ನು ಅವರು ಹೊಂದಿರಲಿಲ್ಲ.
ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಹಣವನ್ನು ವ್ಯಯಿಸುತ್ತಿರಲಿಲ್ಲ. ತಮ್ಮ ಸೌಂದರ್ಯದ ಗುಟ್ಟು ಮನೆಯಲ್ಲಿ ದೊರೆಯುವ ವಿಶಿಷ್ಟವಾದ ಪದಾರ್ಥಗಳಲ್ಲಿ ಅಡಗಿತ್ತು.ಅವುಗಳಲ್ಲಿ ಕಡಲೆಹಿಟ್ಟು ಅಗ್ರಸ್ಥಾನವೆಂದರೆ ತಪ್ಪಾಗಲಾರದು. ಕಡಲೆಹಿಟ್ಟು ಕೇವಲ ಜಜ್ಜಿ, ಬೋಂಡಾ ತಯಾರಿಕೆಗೆ ಮಾತ್ರವಲ್ಲ ಸೌಂದರ್ಯ ಮತ್ತು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ

ಕಡಲೆಹಿಟ್ಟು..! ಅಡುಗೆಯಿಂದ ಹಿಡಿದು ಸೌಂದರ್ಯದವರೆಗೆ ಕಡಲೆಹಿಟ್ಟನ್ನು ಬಳಸುತ್ತಾರೆ. ಸೌಂದರ್ಯವರ್ಧಕವಾಗಿ ಕಾರ್ಯನಿರ್ವಹಿಸುವ ಕಡಲೆ ಹಿಟ್ಟಿನಲ್ಲಿ ಆರೋಗ್ಯದ ಗುಟ್ಟು ಅಡಗಿದೆ.

ಕಡಲೆ ಹಿಟ್ಟಿನಲ್ಲಿರುವ ಗುಣಗಳು ಚರ್ಮಕ್ಕೆ ಚಮತ್ಕಾರವನ್ನು ಮಾಡುತ್ತದೆ. ನೀವು ಶುಷ್ಕ ಅಥವಾ ಎಣ್ಣೆ ಚರ್ಮ ಹೊಂದಿದ್ದರೂ ಕೂಡ ಕಡಲೆಹಿಟ್ಟನ್ನು ಬಳಸಬಹುದು. ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ನಿಮ್ಮ ಚರ್ಮಕ್ಕೆ ಉಂಟು ಮಾಡುವುದಿಲ್ಲ. ಕಡಲೆಹಿಟ್ಟನ್ನು ನಿಮ್ಮ ಚರ್ಮಕ್ಕೆ ಅನ್ವಯಿಸಿದಾಗ ಅದು ತೇವಾಂಶವನ್ನು ಕಾಪಾಡುವುದಲ್ಲದೆ, ಪಿ.ಹೆಚ್‌ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಅಲ್ಲದೆ, ಹೆಚ್ಚುವರಿ ಎಣ್ಣೆಯನ್ನು ಕೂಡ ತೆಗೆದು ಹಾಕಿ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ.

ಕೇವಲ ಫೇಸ್ ವಾಶ್ ಅಥವಾ ಸಾಬೂನು ಬಳಕೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿರುವ ಕೊಳೆಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ಕೆಲವು ವಿಶೇವಾದ ಫೇಸ್‌ ಪ್ಯಾಕ್‌ಗಳನ್ನು ಅನ್ವಯಿಸುವುದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಂಡು ಕೊಳೆಯನ್ನು ಸ್ಚಚ್ಛವಾಗಿ ತೆಗೆದು ಹಾಕುತ್ತದೆ. ಕೊಳೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕಡಲೆ ಹಿಟ್ಟನ್ನು ಆಗಾಗ್ಗೆ ಫೇಸ್ ಪ್ಯಾಕ್‌ನಂತೆ ಬಳಕೆ ಮಾಡಿ. ಇದರಿಂದ ಆರೋಗ್ಯಕರವಾದ ಮತ್ತು ಹೊಳೆಯುವ ಚರ್ಮವನ್ನು ನೀವು ಪಡೆಯಬಹುದು.
ಕಡಲೆ ಹಿಟ್ಟು ನೈಸರ್ಗಿಕವಾದ ಬ್ಲೀಚಿಂಗ್‌ ಗುಣವನ್ನು ಹೊಂದಿದೆ. ಅಲ್ಲದೆ, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಕಡಲೆ ಹಿಟ್ಟು ಅತ್ಯುತ್ತಮವಾದ ಎಕ್ಸ್‌ಫೋಲಿಯೇಟಿಂಗ್‌ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತದೆ.

ನಮ್ಮಲ್ಲಿ ಬಹುತೇಕ ಮಂದಿ ತುರಿಕೆಯ ಕಿರಿಕಿರಿ ಅನುಭವವನ್ನು ಹೊಂದಿರುತ್ತಾರೆ. ಅಂತವರು ಕಡಲೆ ಹಿಟ್ಟನ್ನು ಬಳಕೆ ಮಾಡಬಹುದು. ಹಾಗೆಯೇ ಇದು ಚರ್ಮವನ್ನು ಪುನರ್ ಯೌವನಗೊಳಿಸಿ, ವಿಶೇಷವಾದ ಕಾಂತಿಯನ್ನು ನೀಡುತ್ತದೆ.

- Advertisement -

Related news

error: Content is protected !!