ವರ್ಗಾವಣೆ ಆದೇಶ ಬಂದು 2 ತಿಂಗಳಾದರೂ ಮಂಗಳೂರು ಸಮಾಜ ಕಲ್ಯಾಣ ಇಲಾಖಾ ಉಪನಿರ್ದೇಶಕರ ಕಛೇರಿಯಲ್ಲೇ ಭದ್ರವಾಗಿ ಕುಳಿತ ಅಧೀಕ್ಷಕಿ K.S ಪಾರ್ವತಿಯವರು ಸೆಪ್ಟೆಂಬರ್ ತಿಂಗಳಲ್ಲಿ ಸುಳ್ಯಕ್ಕೆ ವರ್ಗಾವಣೆ ಆದೇಶ ಬಂದಿದ್ದರೂ ಇನ್ನೂ ಕರ್ತವ್ಯ ಸ್ವೀಕರಿಸದೇ ಮಂಗಳೂರಿನಲ್ಲೇ ಸರ್ಕಾರಿ ಅಧಿಕಾರಿಣಿ ಬೀಡುಬಿಟ್ಟಿದ್ದಾರೆ.
ಮಂಗಳೂರೇ ಬೇಕು ನಂಗೆ, ಸುಳ್ಯಕ್ಕೆ ಹೋಗಲ್ಲ ಎನ್ನುತ್ತಾ ಪುಟ್ಟ ಮಕ್ಕಳಂತೆ ಹಠ ಹಿಡಿದು ಕುಳಿತ ಅಧಿಕಾರಿ ಹಲವು ತಿಂಗಳಿಂದ ಖಾಲಿ ಬಿದ್ದಿರುವ ಸುಳ್ಯ ಸಮಾಜ ಕಲ್ಯಾಣ ಇಲಾಖಾ ಉಪನಿರ್ದೇಶಕರ ಹುದ್ದೆಗೆ ಹೋಗದೆ ವರ್ಗಾವಣೆ ಆದೇಶಕ್ಕೆ ಕ್ಯಾರೆ ಅನ್ನದೆ ಭದ್ರವಾಗಿ ನೆಲೆಯೂರಿದ್ದಾರೆ.
ಕಛೇರಿಗೆ ಬಂದ ಜನರೊಂದಿಗೆ ಉದ್ದಟತನ, ಅಹಂಕಾರ, ದರ್ಪ ಮೆರೆಯುವುದು, ಮಧ್ಯಾಹ್ನ 12ಗಂಟೆಯಾದ್ರೂ ಸೂರ್ಯ ಉದಯಿಸದಿರೋದು ಸೇರಿದಂತೆ ಅಧಿಕಾರಿ ವಿರುದ್ದ ಅನೇಕ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕಛೇರಿಗೆ ಬರುವ ಪರಿಶಿಷ್ಟ ಜಾತಿ-ಪಂಗಡಗಳ ಜನರೊಂದಿಗೆ ತುಚ್ಛ ಮಾತುಗಳನ್ನು ಆಡುವುದು, ಕೀಳಾಗಿ ಕಾಣುವುದು ಇಂತಹ ಅಧಿಕಾರಿಗೆ ವರ್ಗಾವಣೆ ಆದೇಶ ಬಂದು 2 ತಿಂಗಳಾದರೂ ಮಂಗಳೂರಿನಲ್ಲೇ ಇರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿ ವಿರುದ್ದ ಕಾನೂನು ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ದ.ಕ ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದ್ದಾರೆ.