Sunday, June 7, 2026
spot_imgspot_img
spot_imgspot_img

ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ..!

- Advertisement -
- Advertisement -

ಮಂಜುನಿಂದ ರಸ್ತೆ ಕಾಣದೇ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಸಾವಿರ ಅಡಿಯ ಹೆಚ್ಚು ಪ್ರಪಾತಕ್ಕೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ಸೋಮನಕಾಡು ಸಮೀಪ ನಡೆದಿದೆ.

ಪ್ರಪಾತಕ್ಕೆ ಬಿದ್ದ ಹಿನ್ನಲೆ ಟಿಪ್ಪರ್ ಲಾರಿಯ ಸಂಪೂರ್ಣ ಜಖಂ ಆಗಿದೆ. ಟಿಪ್ಪರ್ ಲಾರಿ ಪ್ರಪಾತಕ್ಕೆ ಬಿಳ್ತಾ ಇದ್ದಂತೆ ಚಾಲಕ ಅದರಿಂದ ಜಿಗಿದಿದ್ದಾನೆ. ಪರಿಣಾಮ ಚಾಲಕನಿಗೆ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆ ದಾಖಲಿಸಲಾಗಿದೆ.

ಮಧ್ಯರಾತ್ರಿ ರಸ್ತೆ ಕಾಣದೆ ನಿಯಂತ್ರಣ ತಪ್ಪಿದ ಲಾರಿ ಪ್ರಪಾತಕ್ಕೆ ಬಿದ್ದಿದೆ. ಮೂಡಿಗೆರೆಯಿಂದ ಮಂಗಳೂರಿಗೆ ಹೋಗುತಿದ್ದ ಖಾಲಿ ಟಿಪ್ಪರ್ ಲಾರಿ ಆಳವಾದ ಕಂದಕಕ್ಕೆ ಉರುಳಿದೆ. ಬಣಕಲ್ ಪೊಲೀಸರು ಹಾಗೂ ಸ್ಥಳೀಯರು ಪ್ರಪಾತಕ್ಕೆ ಇಳಿದು ಲಾರಿ ಶೋಧ ನಡೆಸಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!