Thursday, June 4, 2026
spot_imgspot_img
spot_imgspot_img

ಟೊಮ್ಯಾಟೋ ವಿಚಾರವಾಗಿ ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ..!

- Advertisement -
- Advertisement -

ಟೊಮ್ಯಾಟೋವನ್ನು ಅಡುಗೆಗೆ ಹಾಕಿದ್ದಕ್ಕೆ ಮಹಿಳೆ ತನ್ನ ಗಂಡನ ಜತೆಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋದ ಘಟನೆ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಪತಿ ಅರ್ಧ ಕೆಜಿ ಟೊಮ್ಯಾಟೋ ಪತ್ನಿಗೆ ಕೊಟ್ಟು ಮತ್ತೆ ಒಂದಾಗಿದ್ದಾರೆ.

ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ತನ್ನ ಹೆಂಡತಿಯನ್ನು ಕೇಳದೆ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರೀ ಜಗಳವಾಗಿದೆ. ಟೊಮ್ಯಾಟೋ ಬಳಸಿದ ವಿಚಾರವಾಗಿ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆ ತನ್ನ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು.

ಪತ್ನಿಯನ್ನು ಹುಡುಕಿ ಹುಡುಕಿ ಸಾಕಾದ ಪತಿ ಪೊಲೀಸರ ಮೊರೆ ಹೋಗಿದ್ದು, ಮೂರು ದಿನದಿಂದ ಪತ್ನಿ ಮಗಳ ಜತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಪೊಲೀಸರು ಮಹಿಳೆ ಮತ್ತು ಮಗುವನ್ನು ಹುಡುಕಿ ಮತ್ತೆ ದಂಪತಿಗಳು ಒಂದಾಗುವಂತೆ ಮಾಡಿದ್ದಾರೆ.

ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ, ಸಂಜೀವ್ ವರ್ಮಾ ತಮ್ಮ ಪತ್ನಿ ಆರತಿಗೆ ಅರ್ಧ ಕಿಲೋ ಟೊಮ್ಯಾಟೋವನ್ನು ಧನಪುರಿ ಪೊಲೀಸ್ ಠಾಣೆಯಲ್ಲಿ ಉಡುಗೊರೆಯಾಗಿ ನೀಡಿದರು. ಧನ್‌ಪುರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಂಪತಿಗೆ ಒಟ್ಟಿಗೆ ಇರುವಂತೆ ಸಲಹೆ ನೀಡಿ, ಪರಸ್ಪರರ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.

- Advertisement -

Related news

error: Content is protected !!