Sunday, May 5, 2024
spot_imgspot_img
spot_imgspot_img

ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

- Advertisement -G L Acharya panikkar
- Advertisement -

ವಾಹನ ತಪಾಸಣೆ ವೇಳೆ ಸಂಚಾರಿ ಪೊಲೀಸರಿಂದ ಬ್ಯಾರಿಕೇಡ್ ಎಳೆದ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಕೆಳಗೆ ಬಿದ್ದು, ಕೈ ಮೇಲೆ ಟಿಪ್ಪರ್ ಹರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆರ್‌ಎಂಸಿ ವೃತ್ತದಲ್ಲಿ ಈ ಘಟನೆ ನಡೆದಿದೆ. ದೇವೇಗೌಡ ಸರ್ಕಲ್ ಕಡೆಯಿಂದ ಆರ್‌ಎಂಸಿ ವೃತ್ತದ ಕಡೆಗೆ ಬೈಕ್ ಹೋಗುತ್ತಿತ್ತು. ಬೈಕ್‌ನಲ್ಲಿ ಹೋಗುತ್ತಿದ್ದ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ

ಹೆಲ್ಮೆಟ್ ಧರಿಸದ್ದಕ್ಕೆ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ರಸ್ತೆಗೆ ಬ್ಯಾರಿಕೇಡ್ ಎಳೆದಿದ್ದಾರೆ. ಈ ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಆಗ ಅವರ ಎಡಗೈ ಮೇಲೆ ಟಿಪ್ಪರ್ ಚಕ್ರ ಹರಿದಿದೆ.

ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸರ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!