Thursday, May 2, 2024
spot_imgspot_img
spot_imgspot_img

ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿಗೆ ಚೂರಿ ಇರಿತ..!!

- Advertisement -G L Acharya panikkar
- Advertisement -

ಅಜ್ಞಾತ ಸ್ಥಳಕ್ಕೆ ಎಳೆದೊಯ್ದು 20 ವರ್ಷದ ಮುಸ್ಲಿಂ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಭಯಾನಕ ಘಟನೆಯೊಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ‌ ಬಳಿ ನಡೆದಿದೆ. ಯುವತಿಗೆ ಕತ್ತು, ಮುಖ, ಕೈಗಳಿಗೆ ಚೂರಿಯಿಂದ ಬಲವಾಗಿ ಇರಿಯಲಾಗಿದೆ.

ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಯುವತಿಯೊಬ್ಬಳು ರಕ್ತಸಿಕ್ತವಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿಚಾರಿಸಿದಾಗ ಆಕೆಯ ಹೆಸರು ಬಿಬಿ ನಿಸ್ಬಾ ಡಂಬಳ (20) ಎಂದು ತಿಳಿದುಬಂತು.

ಈಕೆಯನ್ನು ಮಹಮ್ಮದ್‌ ಸಾದಿಕ್‌ ಎಂಬ ಯುವಕ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಈ ರೀತಿ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಸಾದಿಕ್‌ ತನ್ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾಗಿ ಒಮ್ಮೆ ಹೇಳಿದರೆ ಇನ್ನೊಮ್ಮೆ ಆತ ತನ್ನನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾಳೆ. ಚಾಕು‌ವಿನಿಂದ ಇರಿದಿದ್ದ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ನಡುವೆ ಯುವತಿ ಪದೇಪದೆ ಹೇಳಿಕೆ ಬದಲಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಒಮ್ಮೆ ಮಹಮ್ಮದ್‌ ಸಾದಿಕ್‌ ಕರೆದುಕೊಂಡು ಬಂದ ಎಂದು ಹೇಳಿದರೆ ಇನ್ನೊಮ್ಮೆ ಅಜ್ಞಾತ ಸ್ಥಳಕ್ಕೆ ಹೇಗೆ ಬಂದೆ ಅಂತಾ‌ ಗೊತ್ತೇ ಇಲ್ಲೆ ಎಂದು ಹೇಳುತ್ತಾಳೆ. ಯಾರೋ‌ ಹಿಂದಿನಿಂದ ಹಿಡಿದಂತೆ ಆಗಿತ್ತು, ನಂತರ ಕಣ್ಣು ತೆಗೆದು ನೋಡಿದಾಗ ಅಜ್ಞಾತ ಸ್ಥಳದಲ್ಲಿ ಇದ್ದೆ ಎನ್ನುತ್ತಾಳೆ. ಆಕೆ ಭಯದಿಂದ ಹೀಗೆ ಹೇಳುತ್ತಿರುವ ಸಾಧ್ಯತೆಯೂ ಇದೆ.

ಸದ್ಯ ಯುವತಿ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಚಾಕುವಿನಿಂದ ಇರಿದ ಯುವಕನ ಹುಡುಕಾಟ‌ ನಡೆಸುತ್ತಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

- Advertisement -

Related news

error: Content is protected !!