Friday, May 3, 2024
spot_imgspot_img
spot_imgspot_img

ಸ್ಯಾಂಡಲ್​​ವುಡ್​​ಗೆ ಗುಡ್​​​ನ್ಯೂಸ್​​; ಅ.1 ರಿಂದ ಥಿಯೇಟರ್​​​ನಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ -ಸಿಎಂ ಬೊಮ್ಮಾಯಿ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದ್ದು, ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪಾಸಿಟಿವಿ ರೇಟ್​​ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಯಗಳಲ್ಲಿ ಅಕ್ಟೋಬರ್ 1 ರಿಂದ 100% ರಷ್ಟು ಥಿಯೇಟರ್ ಗೆ ಅವಕಾಶ ನೀಡಲಾಗುತ್ತದೆ. ಕನಿಷ್ಠ 1 ಡೋಸ್​ ಹಾಕಿಸಿಕೊಂಡವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್‌ನ ಇಳಿಮುಖ ಹಿನ್ನೆಲೆ ಕೋವಿಡ್ 19 ಮಾರ್ಗಸೂಚಿಗ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿ ದರ ಸರಾಸರಿ 0.66 ರಷ್ಟಿದೆ. ಆದ್ದರಿಂದ ಕೆಲವು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಇದರಂತೆ ಶೇ.1ಕ್ಕಿಂತ ಪಾಸಿಟಿವಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ 100 ರಷ್ಟು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪಾಸಿಟಿವಿ ದರ 2 ರಷ್ಟು ಆದರೆ ಸಿನಿಮಾ ಮಂದಿರಗಳೇ ಸ್ಥಗಿತ ಮಾಡ್ತೇವೆ. ನೈಟ್ ಕರ್ಫ್ಯೂ‌ 9ರ ಬದಲು ರಾತ್ರಿ 10ರಿಂದ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಶಾಲೆಗಳ ಓಪನ್ ವಿಚಾರವಾಗಿ ಮಾತನಾಡಿ, 1 ರಿಂದ 5ನೇ ತರಗತಿ ಸದ್ಯಕ್ಕೆ ಓಪನ್ ‌ಇಲ್ಲ. 6-12 ನೇ ತರಗತಿಗಳಿಗೆ 100% ಹಾಜರಾತಿಗೆ ಅನುಮತಿ ನೀಡಲಾಗುತ್ತದೆ. ಸೋಮವಾರದಿಂದ ಶುಕ್ರವಾರ ದವರೆಗೆ ಶಾಲಾ ಕಾಲೇಜಿಗೆ ಅನುಮತಿ ನೀಡಲಾಗುತ್ತದೆ ಎಂದರು. ದೇವಸ್ಥಾನಕ್ಕೆ ಅವಕಾಶ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಗ್ಗೆ ನಿರ್ಧಾರ ಮಾಡ್ತಾರೆ. ಇನ್ನು ಯಾದಗಿರಿ, ಮೈಸೂರು, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಚುರುಕು ಮಾಡಲು ಕ್ರಮಕೈಗೊಳ್ಳಲಾಗುತ್ತದೆ.

ಸಿನಿಮಾ ಥಿಯೇಟರ್​ಗಳಿಗೆ ಹಾಕಿರೋ ನಿಯಮಗಳೇ ಪಬ್ ಗಳಿಗೂ ಅನ್ವಯ ಆಗಲಿದ್ದು, ಅಕ್ಟೋಬರ್ 3 ರಿಂದ ಪಬ್​ಗಳು ಆರಂಭ ಮಾಡಲು ಅವಕಾಶ ನೀಡಲಾಗಿದೆ. ಮೂರನೇ ಅಲೆ ಬಗ್ಗೆ ತಜ್ಞರು ಅಧ್ಯಯನ ಮಾಡ್ತಿದ್ದಾರೆ. ಪಕ್ಕದ ರಾಜ್ಯಗಳಿಂದ ಸ್ವಲ್ಪ ಕೊವೀಡ್ ಹೆಚ್ಚಾಗಿದೆ. ಅದಕ್ಕಾಗಿ ಅಲ್ಲಿ ಹೆಚ್ಚು ನಿಗಾ ವಹಿಸಲು ಸೂಚನೆ ನೀಡಿದ್ದೇವೆ. ಮೂರನೇ ಅಲೆಗೆ ಯಾವ ರೀತಿ ಕ್ರಮ ಎಂಬುದನ್ನು ಮುಂದಿನ ಸಭೆಯಲ್ಲಿ ತೀರ್ಮಾನ ಮಾಡ್ತೇವೆ ಎಂದರು.

- Advertisement -

Related news

error: Content is protected !!