Friday, May 3, 2024
spot_imgspot_img
spot_imgspot_img

ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ ಪೊಲೀಸಪ್ಪ

- Advertisement -G L Acharya panikkar
- Advertisement -
This image has an empty alt attribute; its file name is balavikas-866x1024.jpg

ಪ್ರಕರಣಗಳನ್ನು ಭೇದಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೋಲಿಸರ ಪಾತ್ರ ಬಹಳ ದೊಡ್ಡದಾಗಿದೆ. ಆದರೆ, ಇಲ್ಲೋರ್ವ ಪೊಲೀಸಪ್ಪ ದರೋಡೆಕೋರರನ್ನು ಹಿಡಿಯುವ ಬದಲಿಗೆ ಅವರ ಜೊತೆಯಲ್ಲೇ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾನೆ. ಈಗಾಗಲೇ ಎರಡು ಪ್ರಕರಣದಲ್ಲಿ ಸಿಲುಕಿ ಅಮಾನತುಗೊಂಡಿರುವ ಕಾನ್ಸ್​ಟೇಬಲ್ ಈಗ ಮೂರನೇ ಕಳ್ಳತನ ಕೇಸ್​ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಮೂರು ಕಡೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಕಾನ್‌ಸ್ಟೆಬಲ್‌ ಯಲ್ಲಪ್ಪ ಅವರನ್ನು ಬೆಂಗಳೂರು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿಯ ಯಲ್ಲಪ್ಪ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದ. ಸೂಕ್ತ ಪುರಾವೆಗಳನ್ನು ಆಧರಿಸಿ ಯಲ್ಲಪ್ಪನನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹೇಳಿದರು.

ಒಂಟಿಯಾಗಿ ಕಳ್ಳತನಕ್ಕೆ ಇಳಿದಿದ್ದ ಕಾನ್‌ಸ್ಟೆಬಲ್‌ ಕಳ್ಳರ ಜೊತೆ ಒಡನಾಟವಿಟ್ಟುಕೊಂಡಿದ್ದ ಅವರ ಮೂಲಕ ಕಳ್ಳತನ ಮಾಡಿಸುತ್ತಿದ್ದ. ಕಡಿಮೆ ಕಮಿಷನ್ ಸಿಗುತ್ತಿತ್ತು. ಜೊತೆಗೆ, ಕಳ್ಳರು ಸಿಕ್ಕಿಬಿದ್ದಾಗ ಯಲ್ಲಪ್ಪ ಹೆಸರು ಹೇಳುತ್ತಿದ್ದರು. ಇದೇ ಕಾರಣಕ್ಕೆ ಯಲ್ಲಪ್ಪ, ಒಂಟಿಯಾಗಿ ಕಳ್ಳತನ ಮಾಡಲು ತೀರ್ಮಾನಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ರಾತ್ರಿ ಹೊತ್ತು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಇದುವರೆಗೂ ಈತ, 4 ಕೆ.ಜಿ ಬೆಳ್ಳಿ ಸಾಮಗ್ರಿ, 24 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ನಗದು ಕದ್ದಿದ್ದ. ಮದುವೆಗೆ ಹಣ ಬೇಕಿರುವುದಾಗಿ ಹೇಳಿ ಬಳ್ಳಾರಿಯಲ್ಲಿರುವ ವ್ಯಾಪಾರಿಯೊಬ್ಬರಿಗೆ ಬೆಳ್ಳಿ ಸಾಮಗ್ರಿ ಹಾಗೂ ಚಿನ್ನ ಮಾರಿದ್ದ. ಎಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!