Monday, May 13, 2024
spot_imgspot_img
spot_imgspot_img

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಹಲವಾರು ಪ್ರಯೋಜನಗಳು

- Advertisement -G L Acharya panikkar
- Advertisement -

ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಗಳನ್ನು ಕೊಂಚ ಬದಲಾಯಿಸಿಕೊಳ್ಳಬೇಕು. ಋತುಮಾನಕ್ಕೆ ತಕ್ಕ ಹಾಗೆ ನಮ್ಮ ಆಹಾರ ಪದ್ಧತಿಗಳನ್ನು ಬದಾಲಾಯಿಸಬೇಕೆಂದು ನಮ್ಮ ಪೂರ್ವಜರು ಹೇಳಿಕೊಟ್ಟು ಹೋಗಿದ್ದಾರೆ. ಚಳಿಗಾಲದಲ್ಲಿ ಪ್ರತಿನಿತ್ಯ ತಪ್ಪದೇ ಖರ್ಜೂರವನ್ನು ಸೇವಿಸಬೇಕು.
ಖರ್ಜೂರ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದರೆ ನಿತ್ಯವೂ ಖರ್ಜೂರ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಹೀಗೆ ಮಾಡಿದ್ದಲ್ಲಿ ಹಿಮೋಗ್ಲೋನಿನ್ ಮಟ್ಟ ಹೆಚ್ಚಾಗಿ ದೇಹಕ್ಕೆ ಶಕ್ತಿ ನೀಡುತ್ತದೆ. ಜೊತೆಗೆ ದೇಹಕ್ಕೆ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ನಿಯಮಿತವಾಗಿ ಖರ್ಜೂರವನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ದೀರ್ಘ ಕಾಲದಿಂದ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬೇಕು.

ಕಬ್ಬಿಣಾಂಶ ಕಡಿಮೆ ಇರುವವರು ನಿತ್ಯವೂ ಖರ್ಜೂರವನ್ನು ಸೇವಿಸಿದರೆ ಉತ್ತಮ. ಎಲ್ಲಾ ವಯಸ್ಸಿನವರೂ ಖರ್ಜೂರವನ್ನು ಸೇವಿಸಬಹುದು. ತುಂಬಾ ತೆಳ್ಳಗಿದ್ದು ದೇಹದ ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರು ಖರ್ಜೂರವನ್ನು ತಪ್ಪದೇ ತಿಂದರೆ ದೇಹದ ತೂಕ ಕ್ರಮೇಣ ಹೆಚ್ಚಾಗುತ್ತದೆ. ಇದರಲ್ಲಿರುವ ಜೀವಸತ್ವ ಮತ್ತು ಸಕ್ಕರೆ ಅಂಶ ದೇಹದ ತೂಕವನ್ನು ಹೆಚ್ಚಿಸುತ್ತದೆ.
ಅಷ್ಟೆ ಅಲ್ಲದೇ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯವಾಗುತ್ತದೆ. ಉಪವಾಸ ಇರುವವರು ಖರ್ಜೂರವನ್ನು ಸೇವಿಸುತ್ತಾರೆ. ಕಾರಣ ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಉಪವಾಸದ ಸಮಯದಲ್ಲಿ ದೇಹದ ಆರೋಗ್ಯವನ್ನು ಸಮತೋಲನದಲ್ಲಿರಿಸುತ್ತದೆ.

ಉಪವಾಸದ ಸಮಯದಲ್ಲೂ ದೇಹವನ್ನು ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳುವ ಶಕ್ತಿ ಖರ್ಜೂರದಲ್ಲಿದೆ. ಚಳಿಗಾಲದಲ್ಲಿ ರಾತ್ರಿ ಮೂರು ಅಥವಾ ನಾಲ್ಕು ಖರ್ಜೂರಗಳನ್ನು ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದಾಗಿ ಚಳಿಗಾಲದಲ್ಲಿ ಕಾಡುವ ಕೆಲ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಂದ ದೂರ ಉಳಿಯಬಹುದು.
ಮಾರುಕಟ್ಟೆಯಲ್ಲಿ ಅನೇಕ ಬಗೆಯ ಮತ್ತು ಅನೇಕ ಗುಣಮಟ್ಟದ ಖರ್ಜೂರಗಳು ಸಿಗುತ್ತವೆ. ಖರ್ಜೂರವನ್ನು ಖರೀದಿ ಮಾಡುವಾಗ ಎಚ್ಚರ ವಹಿಸಬೇಕು. ಕಡಿಮೆ ಗುಣಮಟ್ಟ ಖರ್ಜೂರ ಸೇವೆನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕೆ ಏನೆಲ್ಲಾ ರಾಸಾಯನಿಕಗಳನ್ನು ಹಾಕಿರುತ್ತಾರೆ ಇಂತಹ ರಾಸಾಯನಿಕಯುಕ್ತ ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಚ್ಚರ. ಆದಷ್ಟು ಉತ್ತಮ ಗುಣಮಟ್ಟದ ಖರ್ಜೂರ ಕೊಂಡು ಸೇವಿಸಿ. ಇನ್ನು ಡಯಾಬೆಟಿಕ್ ಪೇಶೆಂಟ್‌ಗಳು ತಮ್ಮ ವೈದ್ಯರ ಸಲಹೆ ಮೇರೆಗೆ ಖರ್ಜೂರವನ್ನು ಸೇವಿಸಬಹುದು.

- Advertisement -

Related news

error: Content is protected !!