Sunday, May 5, 2024
spot_imgspot_img
spot_imgspot_img

ಕಂಬಳದ ಮರುದಿನ ಜೂಜು ಇಲ್ಲದೆ ಕೋಳಿ ಅಂಕ ನಡೆಸುವ ಚಿಂತನೆಯಿದೆ: ಅಶೋಕ್‌ ಕುಮಾರ್‌ ರೈ

- Advertisement -G L Acharya panikkar
- Advertisement -

ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.25 ಮತ್ತು 26 ರಂದು ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈ ಕಾರ್ಯಕ್ರಮ ಕಂಬಳ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಲಿದೆ,” ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

ಕರಾವಳಿಯ ಜಾನಪದ ಕ್ರೀಡೆಗೆ ರಾಜಮನೆತನದ ಬೆಂಬಲ ದೊರಕಿದೆ. 4 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ, 228 ಕೋಣಗಳು ಭಾಗವಹಿಸಲಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ -ನಮ್ಮ ಕಂಬಳದ ಪೂರ್ವಭಾವಿಯಾಗಿ ಇಂದು ಕುದಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಹಲವು ಸಿನಿಮಾ ನಟ-ನಟಿಯರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಕಂಬಳದ ಮರುದಿನ ಜೂಜು ಇಲ್ಲದೆ ಕೋಳಿ ಅಂಕ ನಡೆಸುವ ಚಿಂತನೆಯಿದೆ.

ಬೆಂಗಳೂರು ಕಂಬಳ ನಂತರ ಮುಂದಿನ ದಿನಗಳಲ್ಲಿ ದೂರದ ಮುಂಬೈ, ದುಬೈ ರಾಷ್ಟ್ರಗಳಲ್ಲಿ ಕಂಬಳ ನಡೆಸಬೇಕೆಂಬ ಬೇಡಿಕೆಗಳು ಬರುತ್ತಿದ್ದು, ಕಂಬಳ ರಾಷ್ಟ್ರವ್ಯಾಪ್ತಿಯಾಗಿ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ. ಮುಂದೆ ಐಪಿಎಲ್ ನಂತೆ ಪ್ರೋ ಕಂಬಳ ಆಗಬಹುದು ಎಂದರು.

- Advertisement -

Related news

error: Content is protected !!