Tuesday, May 21, 2024
spot_imgspot_img
spot_imgspot_img

ರಾತ್ರಿಯಲ್ಲಿ ಮಾಡುವ ಈ ತಪ್ಪುಗಳು ನಿಮ್ಮ ಶುಗರ್ ಕಂಟ್ರೋಲ್ ತಪ್ಪುವಂತೆ ಮಾಡುತ್ತವೆ ಎಚ್ಚರ!

- Advertisement -G L Acharya panikkar
- Advertisement -

ಕಾಯಿಲೆಗಳ ವಿಷಯ ಬಂದಾಗ ಇಂದು ಜಗತ್ತನ್ನು ಆಳುತ್ತಿರುವುದು ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಎಂದು ನೇರವಾಗಿ ಹೇಳಬಹುದು.ಸಾಮಾನ್ಯವಾಗಿ ಎಲ್ಲರೂ ಸಂಜೆಯ ಸಮಯದಲ್ಲಿ ಸ್ನಾಕ್ಸ್ ಸೇವ ನೆಯ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವರು ರಾತ್ರಿ ಊಟದ ನಂತರ ಹಾಗೂ ಊಟಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಹೆಚ್ಚಿನ ಪ್ರಮಾಣದಲ್ಲಿ ಸ್ನಾಕ್ಸ್ ಸೇವಿಸಿ ತಮ್ಮ ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ಹೀಗಾಗಿ ಶುಗರ್ ಕಂಟ್ರೋಲ್ ತಪ್ಪುತ್ತದೆ. ಸಾಧ್ಯವಾದಷ್ಟು ಆರೋ ಗ್ಯಕರ ವಾದ ಮತ್ತು ಸಮತೋಲನವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು.

ಸಕ್ಕರೆ ಕಾಯಿಲೆ ಯಾವಾಗಲೂ ನಿಯಂತ್ರಣದಲ್ಲಿ ಉಳಿಯಬೇಕು ಎಂದರೆ ಅದಕ್ಕೆ ಸರಿಯಾದ ಔಷಧಿಗಳನ್ನು ವೈದ್ಯರು ಹೇಳಿದ ಸಮಯಕ್ಕೆ ಸರಿ ಯಾಗಿ ತೆಗೆದುಕೊಳ್ಳುವುದು ಅತಿ ಮುಖ್ಯ. ಒಂದು ದಿನ ತೆಗೆದುಕೊಳ್ಳು ವುದು ಮತ್ತು ಇನ್ನೊಂದು ದಿನ ಮಿಸ್ ಮಾಡುವುದು ಮಾಡಬಾರದು. ಇದು ಕೂಡ ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪುವಂತೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ನಿದ್ರೆ ಬಹಳ ಅವಶ್ಯಕ ಎಂದು ಹೇಳುತ್ತಾರೆ. ರಾತ್ರಿಯ ಸಮಯದಲ್ಲಿ ಹೀಗಾಗಿ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ನಿಮ್ಮ ಅಭ್ಯಾಸವಾಗಬೇಕು.ಇಲ್ಲದಿದ್ದರೆ ಅದು ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗಲು ಕಾರಣವಾ ಗುತ್ತದೆ. ಹೀಗಾಗಿ ಸಂಜೆ ಸ್ವಲ್ಪ ಬೇಗ ಊಟ ಮಾಡಿ ರಾತ್ರಿ ಹೊತ್ತು ಸಂಪೂ ರ್ಣವಾಗಿ ನೆಮ್ಮದಿಯ ನಿದ್ರೆ ಮಾಡಿ.​

ನೀರಿನ ಅಂಶ ನಮ್ಮ ದೇಹಕ್ಕೆ ಬಹಳ ಮುಖ್ಯ. ಸಕ್ಕರೆ ಕಾಯಿಲೆ ಇರುವವರಿಗೆ ರಾತ್ರಿ ಹೊತ್ತು ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗ ಬಹುದು.ಹಾಗೆಂದು ಮಲಗುವ ಮುಂಚೆ ವಿಪರೀತ ಪ್ರಮಾಣದಲ್ಲಿ ನೀರು ಕುಡಿದು ಮಲಗುವುದಲ್ಲ. ದೇಹಕ್ಕೆ ನಿರ್ಜಲೀಕರಣ ಆಗದಂತೆ ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಉತ್ತಮ.​

ಮಧುಮೇಹ ಇರುವವರಿಗೆ ಇದೊಂದು ದೊಡ್ಡ ತಲೆನೋವು. ಯಾವುದಾ ದರೂ ವಿಷಯವನ್ನು ಅತಿಯಾಗಿ ತಲೆಗೆ ಹಚ್ಚಿ ಕೊಂಡು ಅದರ ಬಗ್ಗೆ ಕೊರಗುತ್ತಾ ಕುಳಿತರೆ ಅದರಿಂದಲೂ ಕೂಡ ಬ್ಲಡ್ ಶುಗರ್ ಲೆವೆಲ್ ಏರುಪೇರು ಆಗುತ್ತದೆ. ಹೀಗಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಉಸಿರಾಟದ ವ್ಯಾಯಾಮಗಳನ್ನು, ಧ್ಯಾನ ಮತ್ತು ಯೋಗಭ್ಯಾಸ ಗಳನ್ನು ರೂಡಿ ಮಾಡಿಕೊಳ್ಳುವುದರಿಂದ ಸಾಕಷ್ಟು ಅನುಕೂಲ ವಿದೆ. ಇದರಿಂದ ರಾತ್ರಿ ಹೊತ್ತು ಒಳ್ಳೆಯ ನಿದ್ರೆ ಬರುತ್ತದೆ.​

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆದ ಹಾಗೆ ನಮ್ಮ ನಿದ್ರಾ ಸಮಯವೂ ಬದಲಾಗಿದೆ. ರಾತ್ರಿ ಹೊತ್ತು 12 ಗಂಟೆಯ ವರೆಗೆ ಕೆಲವರು ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸುತ್ತಾರೆ. ಸಕ್ಕರೆ ಕಾಯಿಲೆ ಇರುವವರು ಈ ರೀತಿಯ ಜೀವನಶೈಲಿಗೆ ಒಳಗಾಗಬಾರದು ಎಂದು ವೈದ್ಯರು ಎಚ್ಚರಿಕೆ ಕೊಡುತ್ತಾರೆ.
ಏಕೆಂದರೆ ಈ ಅಭ್ಯಾಸ ನಿಮ್ಮ ನಿದ್ರೆ ಮೇಲೆ ಪ್ರಭಾವ ಬೀರಿ ಆರೋ ಗ್ಯವನ್ನು ಹಾಳು ಮಾಡುತ್ತದೆ ಮತ್ತು ಬ್ಲಡ್ ಶುಗರ್ ಲೆವೆಲ್ ಏರು ಪೇರು ಆಗುವ ಹಾಗೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯದ ಪರೀಕ್ಷೆ ಮಾಡಿಸಿ ಕೊಳ್ಳುವುದು ಬಹಳ ಮುಖ್ಯ. ಇದನ್ನು ಎಂದಿಗೂ ನಿರ್ಲಕ್ಷ್ಯ ಮಾಡಲೇ ಬಾರದು. ಹಾಗಾದರೆ ಬ್ಲಡ್ ಶುಗರ್ ಲೆವೆಲ್ ಚಕಪ್ ಮಾಡಿಸಿಕೊಳ್ಳು ವುದರಿಂದ ಸದ್ಯದ ಸಕ್ಕರೆ ಕಾಯಿಲೆ ಯಾವ ಪ್ರಮಾಣದಲ್ಲಿದೆ ಎಂಬು ದನ್ನು ತಿಳಿದುಕೊಳ್ಳಬಹುದು. ಅದಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.

- Advertisement -

Related news

error: Content is protected !!