Friday, May 10, 2024
spot_imgspot_img
spot_imgspot_img

ಉಡುಪಿ : ದೇವಸ್ಥಾನದ ಆಭರಣ ಕದ್ದ ಆರೋಪಿಗಳಿಗೆ ಶಿಕ್ಷೆ

- Advertisement -G L Acharya panikkar
- Advertisement -

ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ದೇವರಿಗೆ ಸಂಬಂಧಪಟ್ಟ ಚಿನ್ನದ ಒಡವೆಗಳನ್ನು ಕಳವು ಮಾಡಿದ ಆರೋಪಿಗಳಿಗೆ ನಗರದ ಪ್ರಧಾನ ಸಿ. ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2015 ಸೆಪ್ಟಂಬರ್ 21 ರಂದು ನರಸಿಂಹರಾಜು , ಬಸವರಾಜು , ರಾಜು ಮತ್ತು ಮೊಹಮ್ಮದ್ ಶಬ್ಬೀರ್  ಶಬ್ಬೀರ್ ಎಂಬುವವರು ಉಡುಪಿ ತಾಲೂಕು ಶಿರೂರು ಗ್ರಾಮದ ಶ್ರೀ ಮಹಾಲಸಾ ನಾರಾಯಣೀ ದೇವಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು, ಒಳ ಪ್ರವೇಶಿಸಿ, ದೇವರಿಗೆ ಸಂಬಂಧಿಸಿದ ಒಟ್ಟು 8,66,800 ರೂ. ಮೌಲ್ಯದ 339.940 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿಗಳಿಗೆ ತಲಾ 2 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 5,500 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.

- Advertisement -

Related news

error: Content is protected !!