Thursday, June 18, 2026
spot_imgspot_img
spot_imgspot_img

ಕೊಣಾಜೆ : ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಕಳ್ಳರು ಪೊಲೀಸ್‌ ವಶ

- Advertisement -
- Advertisement -

ಕೊಣಾಜೆ : ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಕಳ್ಳರನ್ನು ಕೊಣಾಜೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವಾಝ್ ಯಾನೆ ನವ್ವ(32), ನಿಯಾಫ್ ಯಾನೆ ನಿಯಾ(28) ಬಂಧಿತರು.

ಆಗಸ್ಟ್ 16 ರಂದು ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬವರು ಮುದುಂಗಾರು ಕಟ್ಟೆ ಶಾಲಾ ಹಿಂಭಾಗದ ಪರಿಸರದಲ್ಲಿ ಸೊಪ್ಪು ಕೊಯ್ಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಆಗಂತುಕರು ಅವರ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಘಟನೆ ಬಗ್ಗೆ ಕೊಣಾಜೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡಿಸಿದ್ದರು.

ಸಿಸಿಟಿವಿಗಳ ಪರಿಶೀಲನೆಯಿಂದ ಕಳ್ಳರ ಸುಳಿವು ಸಿಕ್ಕಿದ್ದು, ಕಳ್ಳರ ಜಾಡು ಹಿಡಿದು ಹೊರಟ ಪೊಲೀಸರು ಕಳ್ಳತನ ನಡೆದ ಎರಡೇ ದಿನದಲ್ಲಿ ಕೈರಂಗಳ ಗ್ರಾಮದ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 10 ಗ್ರಾಂ ಬಂಗಾರ ಹಾಗೂ ಡಿಯೋ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ಕೊಣಾಜೆ ಠಾಣಾ ಪೊಲೀಸರಾದ ಪಿಎಸ್ ಐ ವಿನೋದ್, ಸಿಬ್ಬಂದಿ ಸಂತೋಷ್ ಕೆಸಿ, ಬಸವನ ಗೌಡ ಹಾಗೂ ಸುರೇಶ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -

Related news

error: Content is protected !!