Thursday, June 4, 2026
spot_imgspot_img
spot_imgspot_img

ಬಾವಿಗೆ ಹಾರಿದ ಮಹಿಳೆಯ ರಕ್ಷಣೆ ವೇಳೆ ಅಗ್ನಿಶಾಮಕದಳದ ಸಿಬ್ಬಂದಿ ಸೇರಿ ಮೂವರು ಸಾವು

- Advertisement -
- Advertisement -

ಕೊಲ್ಲಂ: ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಣೆ ಮಾಡಲು ಹೋದ ವೇಳೆ ಬಾವಿಗೆ ಹಾರಿದ ಮಹಿಳೆ ಅಗ್ನಿಶಾಮಕದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನಪ್ಪಿದ ಘಟನೆ ಕೇರಳದ ಕೊಲ್ಲಂನ ನೆಡುವತೂರಿನಲ್ಲಿ ನಡೆದಿದೆ.

ಮೃತರನ್ನು ಅಗ್ನಿಶಾಮಕದಳದ ಸಿಬ್ಬಂದಿ ಸೋನಿ ಎಸ್. ಕುಮಾರ್ (36), ಬಾವಿಗೆ ಹಾರಿದ ಮಹಿಳೆ ಅರ್ಚನಾ (33) ಮತ್ತು ಮಹಿಳೆಯ ಸ್ನೇಹಿತ ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ.

ಮಾಧ್ಯಮಗಳ ಮಾಹಿತಿ ಪ್ರಕಾರ ಮಹಿಳೆ ಅರ್ಚನಾ ಮತ್ತು ಆಕೆಯ ಗೆಳೆಯ ಶಿವಕೃಷ್ಣನ್ ನಡುವೆ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಅರ್ಚನಾ ಏಕಾಏಕಿ ಮನೆಯ ಹತ್ತಿರದ ಬಾವಿಗೆ ಹಾರಿದ್ದಾಳೆ. ಘಟನೆಯ ಬಗ್ಗೆ ಅಗ್ನಿಶಾಮಕ ದಳಕ್ಕೆ ಶಿವಕೃಷ್ಣನ್ ಮಾಹಿತಿ ನೀಡಿದ್ದಾನೆ. ಅಗ್ನಿಶಾಮಕದಳದ ಸಿಬ್ಬಂದಿ ಬಂದಾಗ ಮಹಿಳೆ ಅರ್ಚನಾ ಇನ್ನೂ ಜೀವಂತವಾಗಿದ್ದರು.

ಕಾರ್ಯಾಚರಣೆ ಪ್ರಾರಂಭಿಸಿದ ಅಗ್ನಿಶಾಮಕದಳದವರು , ಅವರ ಸಿಬ್ಬಂದಿ ಸೋನಿ ಅವರನ್ನು ಮಹಿಳೆ ರಕ್ಷಣೆಗೆ ಬಾವಿಗೆ ಇಳಿಸಿದ್ದಾರೆ. ಈ ವೇಳೆ ಮಹಿಳೆಯ ಸ್ನೇಹಿತ ಶಿವಕೃಷ್ಣನ್ ಬಾವಿ ಬಳಿ ನಿಂತಿದ್ದ, ಈ ವೇಳೆ ಅಗ್ನಿಶಾಮಕದಳದ ಸಿಬ್ಬಂದಿ ಬಾವಿಯ ಕಂಬದ ಬಳಿ ನಿಲ್ಲಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಶಿವಕೃಷ್ಣನ್ ಕುಡಿದಿದ್ದರಿಂದ ಅವರ ಮಾತು ಕೇಳಿಲ್ಲ, ಇನ್ನು ಅರ್ಚನಾ ಅವರನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಂತೆ ಹಗ್ಗದ ತಡೆಗೋಡೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ವೇಳೆ ಅಲ್ಲೆ ನಿಂತಿದ್ದ ಶಿವಕೃಷ್ಣನ್ ಸಮತೋಲನ ಕಳೆದುಕೊಂಡು ಬಾವಿಗೆ ಬಿದ್ದಿದ್ದ. ಮೂವರು ಒಟ್ಟಾಗಿ ಬಾವಿಯೊಳಗೆ ಬಿದ್ದಿದ್ದು, ಜೊತೆಗೆ ನೀರಿನ ರಾಟೆಗಾಗಿ ನಿರ್ಮಿಸಿದ್ದ ಇಟ್ಟಿಗೆಯ ಕಂಬವೂ ಬಾವಿಯೊಳಗೆ ಬಿದ್ದಿದೆ. ಇದರಿಂದಾಗಿ ಮೂವರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅರ್ಚನಾ ಮತ್ತು ಶಿವಕೃಷ್ಣನ್ ಕೆಲವು ಸಮಯದಿಂದ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಅವರ ಜಗಳವೇ ಈ ಘಟನೆಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

- Advertisement -

Related news

error: Content is protected !!