Thursday, June 4, 2026
spot_imgspot_img
spot_imgspot_img

ಗರ್ಭದಾರಣೆ ಚಿಕಿತ್ಸೆಯ ನೆಪದಲ್ಲಿ ಕರು ಕೊಂಡೊಯ್ದು ಕಸಾಯಿಖಾನೆಗೆ ನೀಡಿದ ಆರೋಪ; ದೂರುದಾರನಿಗೆ ವಂಚನೆ

- Advertisement -
- Advertisement -

ಬಂಟ್ವಾಳ: ದನಕ್ಕೆ ಕೃತಕ ಗರ್ಭದಾರಣೆ ಹಾಗೂ ಚಿಕಿತ್ಸೆ ನೀಡುವ ನೆಪದಲ್ಲಿ ಕೊಂಡೊಯ್ದ ಗಂಡು ಕರುವನ್ನು ದೂರುದಾರನ ಅನುಮತಿ ಇಲ್ಲದೆ ಕಸಾಯಿಖಾನೆಗೆ ನೀಡಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರರ ಮನೆಗೆ ಆಗಾಗ್ಗೆ ದನಕರುಗಳಿಗೆ ಮದ್ದು ನೀಡಲು ಹಾಗೂ ಕೃತಕ ಗರ್ಭದಾರಣೆ ಮಾಡಲು ಬರುತ್ತಿದ್ದ ಪ್ರಶಾಂತ್ ನಾಯಕ್ ಎಂಬಾತ, ಮೇ.06 ರಂದು ದೂರುದಾರರ ಮನೆಯಲ್ಲಿದ್ದ ಒಂದು ಗಂಡು ಕರುವನ್ನು ಗರ್ಭದಾರಣೆ ಮತ್ತು ಸಂತಾನೋತ್ಪತ್ತಿ ಚಿಕಿತ್ಸೆಯ ನೆಪದಲ್ಲಿ ಕೊಂಡೊಯ್ದಿದ್ದಾನೆ ಎನ್ನಲಾಗಿದೆ.

ಆದರೆ, ಹೇಳಿದ ಉದ್ದೇಶಕ್ಕಾಗಿ ಯಾವುದೇ ಚಿಕಿತ್ಸೆ ಅಥವಾ ವ್ಯವಸ್ಥೆ ಮಾಡದೆ, ದೂರುದಾರರ ಅನುಮತಿ ಪಡೆಯದೇ ಆ ಕರುವನ್ನು ಕಸಾಯಿಖಾನೆಗೆ ನೀಡಿರುವುದು ಬಳಿಕ ತಿಳಿದುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಮೂಲಕ ಪ್ರಶಾಂತ್ ನಾಯಕ್ ದೂರುದಾರರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!