Wednesday, June 17, 2026
spot_imgspot_img
spot_imgspot_img

ಶಾಲೆಯಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ..!

- Advertisement -
- Advertisement -

ಬಿಟಿಎಂ ಲೇಔಟಿನ ಶಾಂತಿನಿಕೇತನ ಶಾಲೆಯ ಮೂವರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಹೋಗಿರುವ ವಿದ್ಯಾರ್ಥಿಗಳು ಆ ಬಳಿಕ ಕಂಡುಬಂದಿಲ್ಲ. ಅಪರಿಚಿತ ವ್ಯಕ್ತಿಯಿಂದ ಸ್ಕೂಟರ್‌ ಒಂದನ್ನು ಪಡೆದು ಅದನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಶಾಲೆ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ.

ಆದರೆ ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ. ಹೇಮಂತ್ ಗೌಡ, ಪವನ್ ಮತ್ತು ಸಂಜಯ್ ನಾಪತ್ತೆಯಾದ ವಿದ್ಯಾರ್ಥಿಗಳು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!