Thursday, June 18, 2026
spot_imgspot_img
spot_imgspot_img

ಬಂಟ್ವಾಳ : ಸಿಡಿಲಿಗೆ ಮೂವರು ಮಹಿಳೆಯರಿಗೆ ಗಾಯ, ಕೆಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ

- Advertisement -
- Advertisement -

ಬಂಟ್ವಾಳ : ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆಗೆ ಸಿಡಿಲಾಘಾತ ಹಾಗೂ ಮಳೆ ಹಾನಿ ಪ್ರಕರಣಗಳು ದಾಖಲಾಗಿವೆ.

ಕೊಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ ಮತ್ತು ರಾಮಯ್ಯ ಗುರಿ ನಿವಾಸಿಯಾದ ಲೀಲಾವತಿ ಬಿನ್ ಸಿಂಗ ಹಾಗೂ ಮೋಹಿನಿ ಬಿನ್ ಸಿಂಗ ಸಿಡಿಲು ಬಡಿದು ಗಾಯವಾಗಿದ್ದು ಬಂಟ್ವಾಳ ತಾಲೂಕು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ವಾಮದಪದವು ಅಜ್ಜಿಬೆಟ್ಟು ಗ್ರಾಮದ ಕರೆಮಜಲು ನಿವಾಸಿ ಶೋಭಾ ಅವರ ಮನೆಗೆ ಸಿಡಿಲಿನ ಆಘಾತವಾಗಿದ್ದು, ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ವಿದ್ಯುತ್ ಸ್ವಿಚ್ ಹಾಗೂ ವಿದ್ಯುತ್ ವಯರಿಂಗ್ ಗಳಿಗೆ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ.

ಇರ್ವತ್ತೂರು ಗ್ರಾಮದ ಕುಲಾಲ್ ನಿವಾಸಿ ಜೈ ಲಕ್ಷ್ಮಿ ಅವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿ ಮಳೆಯಿಂದಾಗಿ ಕೃಷಿ ಹಾನಿ ಸಂಭವಿಸಿದೆ. ಪ್ರೇಮಲತಾ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

- Advertisement -

Related news

error: Content is protected !!