Monday, May 13, 2024
spot_imgspot_img
spot_imgspot_img

ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು..!

- Advertisement -G L Acharya panikkar
- Advertisement -

ಕಾವೇರಿ ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಕುಶಾಲ ನಗರ ಸಮೀಪದ ಕೂಡಿಗೆಯಲ್ಲಿ ನಡೆದಿದೆ.

ನದಿಯಲ್ಲಿ ಮುಳುಗಿದ ಯುವಕರನ್ನು ಕುಶಾಲ ನಗರದ ಕೂಡಿಗೆಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ್ದ ಮೂವರು ಯುವಕರಾದ ವಿನೋದ್, ಸಚಿನ್, ಶ್ರೀನಿವಾಸ್ ಎಂದು ಗುರುತಿಸಲಾಗಿದೆ.

ಈ ಮೂವರು ಯುವಕರು ಮುಳ್ಳುಸೋಗೆ, ಚಿಕ್ಕತ್ತೂರು, ಹೆಬ್ಬಾಲೆ ಮೂಲದದವರು ಎಂದು ತಿಳಿದುಬಂದಿದೆ. ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿರುವ ಶಂಕೆ ಇದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬಾರೆಯ ರ‍್ಯಾಫ್ಟಿಂಗ್‌ ಸಿಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!