Sunday, June 29, 2025
spot_imgspot_img
spot_imgspot_img

ಮೂಡಿಗೆರೆ : ಎಸ್ಟೇಟ್ ನಲ್ಲಿ ಹುಲಿ ಪ್ರತ್ಯಕ್ಷ; ಜನರಲ್ಲಿ ಆತಂಕ.!

- Advertisement -
- Advertisement -

ಮೂಡಿಗೆರೆ : ಮೂಡಿಗೆರೆ ತಾಲೂಕಿನ ಅರೆ ಕೊಡುಗೆ ಸಮೀಪದ ಕುಪನಹಳ್ಳಿ ಎಸ್ಟೇಟ್ನಲ್ಲಿ ಇಂದು ಹುಲಿಯೊಂದು ಪ್ರತ್ಯಕ್ಷವಾಗಿ ಭೀತಿ ಮೂಡಿಸಿದ ಘಟನೆ ನಡೆದಿದೆ.

ಕಾರ್ಮಿಕರು ಹುಲಿಯು ತೋಟದಲ್ಲಿ ತಿರುಗುತ್ತಿದ್ದ ದೃಶ್ಯ ಕಂಡು ಭಯಭೀತರಾಗಿದ್ದಾರೆ. ಇದೆ ವೇಳೆ ಎಸ್ಟೇಟ್ ಕಾರ್ಮಿಕ ಸಂಜೀವ ಎನ್ನುವವರು ಹುಲಿಯ ಫೋಟೋವನ್ನು ಸೆರೆಹಿಡಿದಿದ್ದಾರೆ.
ನಂತರ ಹುಲಿಯು ಸಮೀಪದ ಬಿಲ್ಲೋಟ ಎಸ್ಟೇಟ್ ಕಡೆಗೆ ಸಾಗಿದೆ ಎನ್ನಲಾಗಿದ್ದು, ತಕ್ಷಣ ಮಾಹಿತಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಈ ಕುರಿತಾಗಿ ಗ್ರಾಮಸ್ಥರು ಬಹಳ ಆತಂಕ ವ್ಯಕ್ತಪಡಿಸಿದ್ದಾರೆ. ಮಲೆನಾಡು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅವಲಂಬಿತವಾಗಿರುವ ಕಾರಣ ಸುತ್ತ ಮುತ್ತಲಿನ ಭಾಗದ ಕೃಷಿಕರು ಹಾಗೂ ತೋಟದ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೃಷಿ ಚಟುವಟಿಕೆ ನಡೆಸಲು ಭಯಭೀತರಾಗಿ ಹಿಂದೇಟು ಹಾಕಿದ್ದಾರೆ.

driving

- Advertisement -

Related news

error: Content is protected !!