Wednesday, August 5, 2026
spot_imgspot_img
spot_imgspot_img

ಅತ್ಯಾಚಾರಿ ಮನೆ ಧ್ವಂಸಗೈದ ಮಹಿಳಾ ಪೊಲೀಸರ ತಂಡ!!

- Advertisement -
- Advertisement -

ಮಹಿಳಾ ಪೊಲೀಸರ ಗುಂಪೊಂದು ಅತ್ಯಾಚಾರ ಮಾಡಿದ ಆರೋಪಿಯ ಮನೆಯನ್ನು ಬುಲ್ಡೋಜರ್‍ ನಿಂದ ಕೆಡವಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪುಕರಣ ಸಂಬಂಧಿಸಿ ಭೋಪಾಲ್‌ನಿಂದ ಸುಮಾರು 250 ಕಿ.ಮೀ ದೂರದಲ್ಲಿರುವ ದಾಮೋಹ್ ಎಂಬ ಸ್ಥಳದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ನಾಲ್ಕನೇ ಆರೋಪಿ ಕೌಶಲ್ ಕಿಶೋರ್ ಚೌಬೆ ಪರಾರಿಯಾಗಿದ್ದನು.

ಆರೋಪಿ ಕೌಶಲ್ ಕಿಶೋರ್ ಚೌಬೆ ಮನೆ ಅಕ್ರಮ ಜಮೀನಿನಲ್ಲಿ ಇದ್ದ ಕಾರಣ ಈತನ ಮನೆಯನ್ನು ಮಹಿಳಾ ಪೊಲೀಸರು ಬುಲ್ಡೋಜರ್‍ ಮೂಲಕ ಧ್ವಂಸವ ಮಾಡಿದ್ದಾರೆ.

ಅತ್ಯಾಚಾರವು ಘೋರ ಅಪರಾಧವಾಗಿದ್ದು, ಮಹಿಳಾ ಪೊಲೀಸರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಹಾಗೂ ಅತ್ಯಾಚಾರ ಎಸಗುವ ಆರೋಪಿಗಳಿಗೆ ಶಿಕ್ಷೆ ನೀಡುವ ಈ ರೀತಿಯ ಕ್ರಮಗಳು ಅರ್ಹವಾಗಿವೆ ಎಂದು ಪೊಲೀಸ್‌ ಠಾಣಾಧಿಕಾರಿ ಪ್ರಶಿತಾ ಕುರ್ಮಿ ಹೇಳಿಕೆ ನೀಡಿದರು.

- Advertisement -

Related news

error: Content is protected !!