Friday, June 26, 2026
spot_imgspot_img
spot_imgspot_img

ಟಿಎಂಸಿ ಕಾರ್ಯಕರ್ತನಿಗೆ ಇರಿದು ಬರ್ಬರ ಹತ್ಯೆ!

- Advertisement -
- Advertisement -

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೋರ್ವರನ್ನು ಇರಿದು ಹತ್ಯೆಗೈದಿರುವ ಘಟನೆ ಪಶ್ಚಿಮಬಂಗಾಳದ ಪರ್ಬಾ ವರ್ಧಮಾನ್ ಜಿಲ್ಲೆಯಲ್ಲಿ ನಡೆದಿದೆ.

ಕೇಟುಗ್ರಾಮದ ಅಗರ್ಧಾಂಗ ಪ್ರದೇಶದ ತೃಣಮೂಲ ಕಾಂಗ್ರೆಸ್‌ನ ಪಂಚಾಯತ್ ಸದಸ್ಯ ಶ್ರೀನಿವಾಸ ಘೋಷ್ (54) ಅವರು ಸೋಮವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಬಿಜೆಪಿ ಸದಸ್ಯರೆಂದೇ ಹೇಳಲಾದ ವ್ಯಕ್ತಿಗಳು ಇರಿದು ಹತೈಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಈ ಘಟನೆಗೂ ತನ್ನ ಸದಸ್ಯನಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಬಿಜೆಪಿ ಹೇಳಿದೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ.

driving
- Advertisement -

Related news

error: Content is protected !!