Monday, May 20, 2024
spot_imgspot_img
spot_imgspot_img

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; 8 ಮಂದಿ ಪ್ರಯಾಣಿಕರಿಗೆ ಗಾಯ..!

- Advertisement -G L Acharya panikkar
- Advertisement -

ಕಾಸರಗೋಡು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದ ಘಟನೆ ಕಾಸರಗೋಡಿನ ಹೊರವಲಯದ ವಿದ್ಯಾನಗರದಲ್ಲಿ ನಡೆದಿದ್ದು, 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಗೊಂಡ ಪ್ರಯಾಣಿಕರನ್ನು ನೀಲೇಶ್ವರದ ರೇಷ್ಮಾ, ಪವಿತ್ರಾ, ಕಲೈಟ್ ನ ಕಮಲಾಕ್ಷ, ಪ್ರಭಾಕರನ್, ಪೆರಿಯದ ಗೋಕುಲ್ ರಾಜ್, ಸರಿನಾ, ಮೇಘಾ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ.

ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೃತಿಕಾ ಎಂಬ ಹೆಸರಿನ ಈ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಬಸ್ಸನ್ನು ಓವರ್ ಟೆಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ. ಅಪಾಘಾತದಲ್ಲಿ 8 ಮಂದಿ ಪ್ರಯಾಣಕರು ಗಾಯಗೊಂಡಿದ್ದು ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ವೇಳೆ ಬಸ್ಸಿನಲ್ಲಿ ಬೆರಳಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಸಂಭಾವ್ಯ ಭಾರೀ ಅಪಾಯ ತಪ್ಪಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ನಾಗರಿಕರು ಬಸ್ಸಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರು ಅಪಘಾತದ ಹಿನ್ನೆಲೆಯಲ್ಲಿ ಕೆಲ ಸಮಯ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥ ಗೊಂಡಿತ್ತು. ಬಸ್‌ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಖಾಸಗಿ ಬಸ್ಸುಗಳ ಅತೀವೇಗಕ್ಕೆ ಕಡಿವಾಣ ಹಾಕೇಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

- Advertisement -

Related news

error: Content is protected !!