Wednesday, July 2, 2025
spot_imgspot_img
spot_imgspot_img

ಇಂದು ರಾತ್ರಿ 12: 30 ರಿಂದ ದಿನದ 24 ಗಂಟೆ ಆರ್‌’ಟಿಜಿಎಸ್ ಸೌಲಭ್ಯ

- Advertisement -
- Advertisement -

ನವದೆಹಲಿ: ಇಂದು ರಾತ್ರಿ 12: 30 ರಿಂದ ಆರ್‌’ಟಿಜಿಎಸ್ ಸೌಲಭ್ಯ ದಿನದ 24 ಗಂಟೆ ದೊರೆಯಲಿದೆ ಎಂದು ಆರ್‌’ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭಾನುವಾರ (ಡಿ.13) ತಿಳಿಸಿದ್ದಾರೆ. ಡಿಜಿಟಲ್ ಹಣ ಪಾವತಿಗೆ ಹೆಚ್ಚಿನ ಒತ್ತು ನೀಡುವುದು ಈ ಕಾರ್ಯದ ಉದ್ದೇಶವಾಗಿದೆ.


ಸುದ್ದಿಗೋಷ್ಠಿಯಲ್ಲಿ ಅವರು 24x7x365 RTGS ಸೌಲಭ್ಯ ಹೊಂದಿರುವ ಕೆಲವೇ ದೇಶಗಳ ಪೈಕಿ ಭಾರತವೂ ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.


2021ರ ಜನವರಿ1 ರಿಂದ ಪೋಸ್ ಟರ್ಮಿನಲ್‌ಗಳಲ್ಲಿ ಸಂಪರ್ಕವಿಲ್ಲದ ಕಾರ್ಡ್ ವಹಿವಾಟಿನ ಮಿತಿಯನ್ನು 5,000 ರೂ. ಗೆ ಹೆಚ್ಚಿಸಲು ಆರ್‌ಬಿಐ ನಿರ್ಧರಿಸಿದೆ.
ಡಿ.1ರಿಂದಲೇ ಜಾರಿಯಾಗಬೇಕಿದ್ದ ವ್ಯವಸ್ಥೆ ತುಸು ತಡವಾಗಿ ಡಿ.13ರ ಮಧ್ಯರಾತ್ರಿಯಿಂದ ಜಾರಿಗೆ ಬರುತ್ತಿದೆ.

- Advertisement -

Related news

error: Content is protected !!