Tuesday, June 25, 2024
spot_imgspot_img
spot_imgspot_img

ಇಂದು ಐದನೇ ಹಂತದ ಚುನಾವಣೆ.. 49 ಕ್ಷೇತ್ರಗಳಲ್ಲಿ ಚುನಾವಣೆ

- Advertisement -G L Acharya panikkar
- Advertisement -

ದೇಶದಾದ್ಯಂತ 5ನೇ ಹಂತದ ಚುನಾವಣೆ ನಡೆಯುತ್ತಿದೆ. ಐದನೇ ಹಂತದ ಮತದಾನದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇಂದಿನ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು ಸಂಜೆ 6 ಗಂಟೆವರೆಗೆ ನಡೆಯಲಿದೆ. ಐದನೇ ಹಂತದ ಮತದಾನ 49 ಸ್ಥಾನಗಳಿಗೆ ನಡೆಯುತ್ತಿದೆ.

ಒಟ್ಟು 8 ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ 695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐದನೇ ಸುತ್ತಿನಲ್ಲಿ ಮತದಾನ ನಡೆಯುತ್ತಿರುವ ಸ್ಥಾನಗಳಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7 ಬಿಹಾರ ಮತ್ತು ಒಡಿಶಾದಲ್ಲಿ ತಲಾ ಐದು ಸ್ಥಾನಗಳು ಸೇರಿವೆ. ಇದಲ್ಲದೆ ಜಾರ್ಖಂಡ್‌ನ ಮೂರು ಸ್ಥಾನಗಳು, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ತಲಾ ಒಂದು ಸ್ಥಾನಕ್ಕೂ ಮತದಾನ ನಡೆಯುತ್ತಿದೆ.

ಪ್ರಮುಖ ಅಭ್ಯರ್ಥಿಗಳು:

ರಾಹುಲ್ ಗಾಂಧಿ, ಸ್ಮೃತಿ ಇರಾನಿ, ರಾಜ್‌ನಾಥ್‌ ಸಿಂಗ್‌, ಒಮರ್‌ ಅಬ್ದುಲ್ಲಾ, ಪಿಯೂಷ್‌ ಗೋಯಲ್‌, ರಾಜೀವ್‌ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಗ್ ಪಾಸ್ವಾನ್‌, ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

- Advertisement -

Related news

error: Content is protected !!