Saturday, May 11, 2024
spot_imgspot_img
spot_imgspot_img

71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ

- Advertisement -G L Acharya panikkar
- Advertisement -

ಮೋದಿ ಮೋದಿ ಮೋದಿ.. 2014ರ ತರುವಾಯ ದೇಶದ ಮೂಲೆಮೂಲೆಗೂ ತಲುಪಿದ ಹೆಸರು. ದಕ್ಷಿಣ ಭಾರತದ ರಾಜ್ಯ ಕರ್ನಾಟಕದಲ್ಲಿ ಸಹ ಸ್ಥಳೀಯ ಬಿಜೆಪಿ ನಾಯಕರನ್ನೂ ಮರೆತು ಗುಜರಾತ್ ಮೂಲದ ಮುಖಂಡ ನರೇಂದ್ರ ಮೋದಿ ಅವರನ್ನೇ ಪಠಿಸತೊಡಗಿದ್ದರು. ಯಾವ ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿಸಿದರೂ ನಮಗೆ ಮೋದಿಯಂತಹ ನಾಯಕ ಬೇಕು ಎನ್ನುತ್ತಿದ್ದರು ಆಗ. ಆ ಮಾತಿನ ಹಿಂದೆ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಬೇಕು ಎಂಬ ಅದಮ್ಯ ಇಚ್ಛೆಯಿರುತ್ತಿತ್ತು. ಬಳಿಕ ಆ ಹಂಬಲ ಒಂದಲ್ಲ, ಎರಡು ಬಾರಿ ಈಡೇರಿತು ಎಂಬುದು ಇತಿಹಾಸ ಮತ್ತು ವರ್ತಮಾನ.

ಸ್ವಾತಂತ್ರ್ಯಾ ನಂತರ ಹುಟ್ಟಿದ ಮೊದಲ ಪ್ರಧಾನಿ
ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿರುವ ಭಾರತದಲ್ಲಿ ಈವರೆಗೆ ಹಲವು ಪ್ರಧಾನಿಗಳು ಆಡಳಿತ ನಡೆಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರನ್ನು ಬಿಟ್ಟು ಮಿಕ್ಕ ಎಲ್ಲ ಪ್ರಧಾನಿಗಳೂ 1947ಕ್ಕಿಂತ ಮುನ್ನ ಹುಟ್ಟಿದವರು. ಅಂದರೆ ಬ್ರಿಟಿಷ್ ಆಳ್ವಿಕೆಯಲ್ಲಿ ಹುಟ್ಟಿದವರು. ಆದರೆ ನರೇಂದ್ರ ಮೋದಿ ಅವರೊಬ್ಬರೇ ಸ್ವಾತಂತ್ರ್ಯಾನಂತರ ಹುಟ್ಟಿದ ಏಕೈಕ ಪ್ರಧಾನಿ.

ಈ ಬಾರಿ 71ರ ಸಂಭ್ರಮ
ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿದ್ದು ಸೆಪ್ಟೆಂಬರ್​ 17, 1950ರಂದು ವಡೋದರಾದಲ್ಲಿ. 1972ರಲ್ಲಿ ಆರ್​ಎಸ್​ಎಸ್​ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ನಂತರ 1987ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು ಮತ್ತು 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು.

2001ರಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದ ಅವರು, ನಂತರ ಮೂರು ಅವಧಿಗೆ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು 2013ರಲ್ಲಿ ಬಿಜೆಪಿ ಘೋಷಿಸಿತ್ತು. ಅದರಂತೆ 2014ರಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಧಾನಿ ಹುದ್ದೆಗೆ ಏರಿದ ನರೇಂದ್ರ ಮೋದಿಯವರು ಇದೀಗ 2019ರಲ್ಲೂ ಮತ್ತೆ ಪ್ರಧಾನಿ ಗದ್ದುಗೆಗೆ ಏರಿದ್ದಾರೆ. ಈ ಬಾರಿ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಗುಜರಾತ್​ ಬಿಜೆಪಿ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಈ ದಿನ ಗುಜರಾತ್ ನ ಸುಮಾರು 7100 ಹಳ್ಳಿಗಳಲ್ಲಿ ರಾಮ್​ ಧುನ್​ ಕಾರ್ಯಕ್ರಮ ನಡೆಯಲಿದೆ

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಅವರ ಜನ್ಮದಿನಕ್ಕೆ ನಾವೂ ಒಂದು ವಿಶ್ ಮಾಡಬಹುದೇ?

driving
- Advertisement -

Related news

error: Content is protected !!