Saturday, April 27, 2024
spot_imgspot_img
spot_imgspot_img

ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಜನಿಸುವ ಮಗುವಿಗೆ ತಂದೆಯ ಆಸ್ತಿಯಲ್ಲಿ ಹಕ್ಕು; ಸುಪ್ರೀಂ ಮಹತ್ವದ ತೀರ್ಪು

- Advertisement -G L Acharya panikkar
- Advertisement -

ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಜನಿಸುವ ಮಗುವಿನ ಭವಿಷ್ಯದ ಕುರಿತಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಸಹಬಾಳ್ವೆ ನಡೆಸಿದರೆ ಅಥವಾ ಲಿವ್‌ ಇನ್‌ ಸಂಬಂಧದಲ್ಲಿದ್ದರೆ ಅವರ ಮಗುವಿಗೆ ಪೂರ್ವಜರ ಆಸ್ತಿಯಲ್ಲಿ ಪಾಲನ್ನು ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ತಂದೆ ಮತ್ತು ತಾಯಿ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಆಸ್ತಿಯಲ್ಲಿ ಹಕ್ಕಿಲ್ಲವೆಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಆದರೆ ಮಗುವಿನ ಪೋಷಕರು ಮದುವೆಯಾಗದಿದ್ದರೂ, ಅವರು ದೀರ್ಘಕಾಲದವರೆಗೆ ಪತಿ-ಪತ್ನಿಯಂತೆ ಒಟ್ಟಿಗೆ ವಾಸಿಸುತ್ತಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಮಗು ತಮ್ಮದೇ ಎಂದು ಸಾಬೀತುಪಡಿಸಿದರೆ, ಆ ಮಗು ತಂದೆಯ ಆಸ್ತಿಗೆ ಅರ್ಹವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ತಂದೆಯ ಆಸ್ತಿಯಿಂದ ವಂಚಿತನಾದ ವ್ಯಕ್ತಿಯೊಬ್ಬ, ತಾನು ಅಕ್ರಮ ಸಂತಾನ ಎಂದು ಹೇಳಿ ಆಸ್ತಿ ಹಕ್ಕುಗಳಿಂದ ನನ್ನನ್ನು ಹೊರ ಹಾಕಲಾಗಿದ್ದು, ತಂದೆಯ ಆಸ್ತಿಯಲ್ಲಿ ನನಗೆ ಪಾಲು ನೀಡುತ್ತಿಲ್ಲ ಎಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ, ಆತನ ಪೋಷಕರಿಗೆ ಮದುವೆಯಾಗದ ಕಾರಣ ಆತನಿಗೆ ಆಸ್ತಿ ಹಕ್ಕಿಲ್ಲ ಎಂಬುದಾಗಿ ಕೇರಳ ಹೈಕೋರ್ಟ್ 2009ರಲ್ಲಿ ತೀರ್ಪು ನೀಡಿದ್ದರಿಂದ ಆತ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ. ಇದೀಗ ಸುಪ್ರೀಂ ಕೋರ್ಟ್‌ ಕೇರಳ ಹೈಕೋರ್ಟ್‌ನ ತೀರ್ಪು ರದ್ದುಗೊಳಿಸಿ ವ್ಯಕ್ತಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಮಗುವಿನ ಪೋಷಕರು ವಿವಾಹವಾಗದಿದ್ದರೂ ಪತಿ-ಪತ್ನಿಯರಂತೆ ದೀರ್ಘಕಾಲದವರೆಗೆ ಒಟ್ಟಿಗೆ ವಾಸಿಸುತ್ತಿದ್ದಲ್ಲಿ ಮತ್ತು ಅವರ ಡಿಎನ್‌ಎ ಪರೀಕ್ಷೆಯಲ್ಲಿ ಅವರದೇ ಮಗು ಎಂದು ಸಾಬೀತಾದರೆ ಆ ಮಗುವಿಗೆ ಪೂರ್ವಜರ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದೆ.

- Advertisement -

Related news

error: Content is protected !!