Sunday, May 5, 2024
spot_imgspot_img
spot_imgspot_img

ತೊಕ್ಕೊಟ್ಟು: ತಾತ್ಕಾಲಿಕ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!

- Advertisement -G L Acharya panikkar
- Advertisement -

ಮಂಗಳೂರು: ಉಳ್ಳಾಲ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದ್ದ ಬೀಫ್ ಸ್ಟಾಲ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯನ್ನು ನೂತನವಾಗಿ‌ ನಿರ್ಮಾಣ ಮಾಡುವ ಉದ್ದೇಶದಿಂದ ಕೆಡವಲಾಗಿದೆ, ಬಳಿಕ ಈ ಹಿಂದಿನ ಮಾರುಕಟ್ಟೆಯಲ್ಲಿದ್ದ ಅಂಗಡಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಆ ಅಂಗಡಿಗಳ ಜತೆಗೆ ಬೀಫ್ ಸ್ಟಾಲ್ ಗಳನ್ನು ರೈಲ್ವೇ ಹಳಿ ಬದಿಯಲ್ಲಿ ತೆರೆಯಲಾಗಿತ್ತು.

ಅಲ್ಲಿ ತೆರೆಯಲಾಗಿದ್ದ ಬೀಫ್ ಸ್ಟಾಲ್ ಗಳನ್ನು ಮುಚ್ಚುವಂತೆ ಕೆಲ ಸಂಘಟನೆಗಳು ಉಳ್ಳಾಲ ನಗರಸಭೆಗೆ ಮನವಿ ಸಲ್ಲಿಸಿತ್ತು. ಈ ನಡುವೆ ಬೀಫ್ ಸ್ಟಾಲ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!