Thursday, June 4, 2026
spot_imgspot_img
spot_imgspot_img

ಉಳ್ಳಾಲ: ರೈಲು ಡಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ದಾರುಣ ಸಾವು

- Advertisement -
- Advertisement -

ಉಳ್ಳಾಲ: ರೈಲು ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ದಾರುಣ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. ಕೋಟೆಕಾರು, ಬೀರಿ ಭಂಡಾರಮನೆ ಬಳಿಯ ನಿವಾಸಿ ಸತೀಶ್ಚಂದ್ರ ನಾಯ್ಕ್ (28) ಮೃತ ಯುವಕನಾಗಿದ್ದು ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ರೈಲು ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿದ್ದು ಮೃತ ದೇಹ ಪತ್ತೆಯಾಗಿದ್ದು. ಹಳಿ ದಾಟುವಾಗ ರೈಲು ಡಿಕ್ಕಿಯಾಗಿದ್ದು ಎಳಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮಧ್ಯಾಹ್ನ ಹೊತ್ತಿಗೆ ಮೃತ ದೇಹ ನೋಡಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸತೀಶ್ಚಂದ್ರ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ಸಾಲೆತ್ತೂರು ಶಾಖೆಯಿಂದ ಇತ್ತೀಚೆಗಷ್ಟೆ ಕೊಡಗಿನ ಮಡಿಕೇರಿಗೆ ವರ್ಗಾವಣೆಗೊಂಡಿದ್ದರು. ವಾರದ ರಜಾ ದಿನ ಆಗಿದ್ದರಿಂದ ಮಡಿಕೇರಿಯಿಂದ ಊರಿಗೆ ಬಂದಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದ ಸತೀಶ್ವಂದ್ರ, ತೊಕ್ಕೊಟ್ಟಿಗೆ ಹೋಗಿದ್ದವರು ಹಿಂತಿರುಗಿ ಬಂದಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ರೈಲ್ವೇ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!