Saturday, June 27, 2026
spot_imgspot_img
spot_imgspot_img

ತೊಕ್ಕೊಟ್ಟು: ಮನೆಯ ಹಂಚು ಸರಿಸಿ ಮನೆಯೊಳಗೆ ನುಗ್ಗಿ ಕಳವು ಪ್ರಕರಣ; ಆರೋಪಿಯ ಬಂಧನ, ಚಿನ್ನಾಭರಣ, ಮೊಬೈಲ್ ವಶಕ್ಕೆ

- Advertisement -
- Advertisement -

ತೊಕ್ಕೊಟ್ಟು: ಓವರ್ ಬ್ರಿಡ್ಜ್ ಸಮೀಪದ ಒಳಪೇಟೆ ಬಳಿ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಜಯರಾಜ್ ಕೆ. ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಉಬೇದುಲ್ಲಾ (27) ಎಂದು ಗುರುತಿಸಲಾಗಿದೆ. ಈತ ಮಾ.19ರಂದು ಮನೆಯವರು ಮಲಗಿದ್ದ ವೇಳೆ ಮನೆಯ ಹಂಚು ಸರಿಸಿ ಒಳನುಗ್ಗಿ ಚಿನ್ನಾಭರಣ ಹಾಗೂ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಎಂದು ಮನೆಯ ಮಾಲಿಕ ಜಯರಾಜ್ ಅವರು ದೂರು ನೀಡಿದ್ದರು.

ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಉಬೇದುಲ್ಲಾ ನನ್ನು ಬಂಧಿಸಿ ಕಳವಾದ ಚಿನ್ನಾಭರಣ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ

- Advertisement -

Related news

error: Content is protected !!