Sunday, November 10, 2024
spot_imgspot_img
spot_imgspot_img

*ಒಂದು ರೂಪಾಯಿಗಾಗಿ ಯುವಕರ ದಾಂಧಲೆ ವೈರಲ್ ಆಯ್ತು ವಿಡಿಯೋ!*

- Advertisement -
- Advertisement -

ಉಡುಪಿ: ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಒಂದು ರೂಪಾಯಿಗಾಗಿ ಯುವಕರ ತಂಡ ಹೊಡೆದಾಟಕ್ಕಿಳಿದ ಘಟನೆ ಕೆಲದಿನಗಳ ಹಿಂದೆ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟೋಲ್ ಹಣ ಪಾವತಿ ಸಂದರ್ಭ ಸಿಬ್ಬಂದಿ 5 ರುಪಾಯಿ ಚಿಲ್ಲರೆ ಬದಲಿಗೆ 4 ರುಪಾಯಿ ನೀಡಿದ್ದರು. ಇದನ್ನೇ ಪ್ರಶ್ನಿಸಿ ಯುವಕರ ತಂಡ ಟೋಲ್ ಸಿಬ್ಬಂದಿಯ ಮೇಲೆ ಎಗರಾಡಿದ್ದಾರೆ.

ಒಂದು ರೂಪಾಯಿ ವಾಪಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹೊಡೆದಾಟವೂ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಯುವಕರು ಮಾಸ್ಕ್ ಕೂಡಾ ಧರಿಸಿರಲಿಲ್ಲ. ಟೋಲ್ ಸಿಬ್ಬಂದಿ ಮತ್ತು ಯುವಕರ ತಂಡ ಅಕ್ಷರಶಃ ಗುಂಪುಗೂಡಿ ಘರ್ಷಣೆ ಸ್ವರೂಪ ಪಡೆದುಕೊಂಡಿದೆ ಘಟನೆ ನಡೆದ ಸಂದರ್ಭ ಟೋಲ್ ಗೇಟ್ ನಲ್ಲಿ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!