Saturday, June 28, 2025
spot_imgspot_img
spot_imgspot_img

ಆಧಾರ್‌ಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡಲು ನಾಳೆ ಕೊನೆ ದಿನಾಂಕ; ಮಾಡದಿದ್ದರೆ ದಂಡ ಫಿಕ್ಸ್‌

- Advertisement -
- Advertisement -

ನವದೆಹಲಿ: ಆಧಾರ್‌ ಕಾರ್ಡ್‌ ನಂಬರ್‌ಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡಲು ನೀಡಲಾಗಿರುವ ಅವಧಿ ನಾಳೆಗೆ ಮುಕ್ತಾಯವಾಗುತ್ತಿದೆ. ಆಧಾರ್ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.

ಬ್ಯಾಂಕ್, ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ -ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿದೆ. ನಾಳೆಯೊಳಗೆ ಆಧಾರ್ ಜೋಡಣೆ ಮಾಡಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಹೇಳಲಾಗಿದೆ ಅಲ್ಲದೇ ಈ ದಿನಾಂಕದ ಬಳಿಕ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡಿಸಲು ಸುಮಾರು 10 ಸಾವಿರ ರೂ. ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಆಧಾರ್‌ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ.?

ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌ ಗೆ ಹೋಗಿ ಅದರಲ್ಲಿ ಸ್ಕ್ರೀನ್‌ನ ಎಡಭಾಗದಲ್ಲಿ ಮೇಲ್ಭಾಗದಲ್ಲಿರುವ ‘ಕ್ವಿಕ್‌ ಲಿಂಕ್ಸ್‌’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಲಿಂಕ್‌ ಆಧಾರ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಅಲ್ಲಿ ಕೇಳುವ ಮಾಹಿತಿಗಳನ್ನು ತುಂಬುವ ಮೂಲಕ ಲಿಂಕ್‌ ಮಾಡಬಹುದು.

UIDPAN ಎಂದು ಟೈಪ್‌ ಮಾಡಿ ಸ್ಪೇಸ್‌ ಕೊಟ್ಟು ಆಧಾರ್‌ ನಂಬರ್‌ ಬಳಿಕ ಸ್ಪೇಸ್‌ ಕೊಟ್ಟು ಪಾನ್‌ ಕಾರ್ಡ್‌ ನಂಬರ್‌ ಟೈಪ್‌ ಮಾಡಿ 567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸಬೇಕು.

- Advertisement -

Related news

error: Content is protected !!