Friday, June 5, 2026
spot_imgspot_img
spot_imgspot_img

ಯುವತಿಗೆ ಕಿರುಕುಳ ನೀಡಿದ ಆರೋಪ- ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ತಂಡ

- Advertisement -
- Advertisement -

ಮಂಗಳೂರು, ಅ 20: ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ತಂಡವೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೊಲೀಸ್ ಗಿರಿ ತೋರಿದ ಘಟನೆಯ ವಿಡಿಯೋ ಮಂಗಳೂರಿನಲ್ಲಿ ವೈರಲ್ ಆಗಿದೆ.

ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನೊಂದು ವಿಡಿಯೋದಲ್ಲಿ ಯುವಕ ತಾನು ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಾನೆ. ನೈತಿಕ ಪೊಲೀಸ್ ಗಿರಿ ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ. ಗುಡ್ಡ ಪ್ರದೇಶದಲ್ಲಿ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು ಬೆತ್ತದಿಂದ ಹೊಡೆಯುವ ವಿಡಿಯೋ ಚಿತ್ರೀಕರಿಸಲಾಗಿದೆ.

ಅದರಲ್ಲಿ ತುಳು ಭಾಷೆಯಲ್ಲಿ “ಪೊಣ್ಣು ಬೋಡ ನಿಕ್ಕ್? ರೇಪ್ ಮಲ್ಪುವನ?” (ಹೆಣ್ಣು ಬೇಕಾ ನಿಂಗೆ.. ರೇಪ್ ಮಾಡ್ತೀಯಾ..) ಎಂದು ಪ್ರಶ್ನಿಸಿ ಮುಖ ಮೂತಿ ನೋಡದೆ ಹೊಡೆಯುತ್ತಾನೆ. ಮತ್ತೊಂದು ವಿಡಿಯೋದಲ್ಲಿ ಯುವಕ ತಾನು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದೆ. ಮುಟ್ಟಬಾರದ ಜಾಗ ಮುಟ್ಟಿ ಕಿಸ್ ಕೊಟ್ಟೆ, ಈ ವೇಳೆ ಆಕೆ ಬೊಬ್ಬೆ ಹಾಕಿದ್ದರಿಂದ ಓಡಿಹೋದೆ ಎಂದು ಹೇಳುತ್ತಿದ್ದಾನೆ.

- Advertisement -

Related news

error: Content is protected !!