Sunday, June 21, 2026
spot_imgspot_img
spot_imgspot_img

ಮಹಿಳೆಗೆ ನಂಬರ್‌ ಕೊಟ್ಟು ಕಾಲ್‌ ಮಾಡುವಂತೆ ಟಾರ್ಚರ್‌; ಡಿಶ್ ರಿಪೇರಿ ಬಶೀರ್‌ನಿಗೆ ಹಿಗ್ಗಾಮುಗ್ಗ ಥಳಿಸಿದ ಗಂಡ..!!

- Advertisement -
- Advertisement -

ಮಹಿಳೆಯರಿಗೆ ನಂಬರ್ ಕೊಟ್ಟು ಕಾಲ್ ಮಾಡುವಂತೆ ಪೀಡಿಸುತ್ತಿದ್ದವನಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಟ್ಟೆಮನೆ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಶೀರ್ ಎಂಬಾತ ಮಹಿಳೆಯರಿಗೆ ಮೊಬೈಲ್ ನಂಬರ್ ಕೊಟ್ಟು ಕಾಲ್ ಮಾಡುವಂತೆ ಟಾರ್ಚರ್ ನೀಡುತ್ತಿದ್ದ. ಜಯನಗರದಲ್ಲಿ ಡಿಶ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ ಬಶೀರ್. ಪರಿಚಯದ ಮಹಿಳೆಯರಿಗೆ ಮಾತನಾಡುವ ನೆಪದಲ್ಲಿ ಮೊಬೈಲ್ ನಂಬರ್ ಕೊಡುತ್ತಿದ್ದ ಬಳಿಕ ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ.

ಈ ಹಿಂದೆಯೂ ಇದೇ ಕೆಲಸ ಮಾಡಿ ಏಟು ತಿಂದಿದ್ದ. ಆದರೂ ಮಹಿಳೆಯರಿಗೆ ಟಾರ್ಚರ್ ಕೊಡುವ ಬುದ್ಧಿ ಬಿಟ್ಟಿರಲಿಲ್ಲ. ಕಟ್ಟೆಮನೆ ಗ್ರಾಮದ ರಮೇಶ್ ಎಂಬುವವರ ಪತ್ನಿಗೆ ಮೊಬೈಲ್ ನಂಬರ್ ನೀಡಿದ್ದ ಬಶೀರ್. ಮೊಬೈಲ್ ನಂಬರ್ ನೀಡಿ ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ಬಶೀರ್ ಕಾಟಕ್ಕೆ ಬೇಸತ್ತು ಹೋಗಿದ್ದ ಮಹಿಳೆ. ಪೀಡಿಸುತ್ತಿರುವ ವಿಚಾರ ಗಂಡನಿಗೆ ಗೊತ್ತಾಗಿದೆ. ಕುಪಿತಗೊಂಡು ಬಶೀರ್‌ನಿಗೆ ನಡುರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದಿದ್ದಾನೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!