Saturday, June 20, 2026
spot_imgspot_img
spot_imgspot_img

ಸಂಚಾರಿ ನಿಯಮ ಉಲ್ಲಂಘನೆ: 2 ಕೋಟಿ 35 ಲಕ್ಷ ಮೊತ್ತದ ದಂಡ ಸಂಗ್ರಹ

- Advertisement -
- Advertisement -

ಬೆಂಗಳೂರು: ಕೊರೊನಾ ಲಾಕ್​ಡೌನ್​ ಬಳಿಕ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸೆಪ್ಟೆಂಬರ್ ‌20 ರಿಂದ 26 ರವರೆಗೆ ಅಂದರೆ ಕೇವಲ 6 ದಿನಗಳಲ್ಲಿ ಟ್ರಾಫಿಕ್ ರೂಲ್ಸ್​ ಉಲ್ಲಂಘಿಸಿದವರಿಂದ ಒಟ್ಟು 2 ಕೋಟಿ, 35 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ.


ಕೊರೊನಾ‌ ಸಾಂಕ್ರಾಮಿಕ ವ್ಯಾಪಕವಾಗಿದ್ದ ವೇಳೆ ಪೊಲೀಸರು ವಾಹನ ತಡೆದು ದಂಡ ಹಾಕುವ ಕಾರ್ಯಕ್ಕೆ ತಡೆ ನೀಡಿದ್ದರು. ಆದರೆ ಮತ್ತೆ ಅದಕ್ಕೆ ಚಾಲನೆ ನೀಡಿದ್ದು ಆರೇ ದಿನಗಳಲ್ಲಿ ಒಟ್ಟು 55,717 ಪ್ರಕರಣಗಳು ದಾಖಲಾಗಿದ್ದು, ಭಾರೀ ಮೊತ್ತದ ದಂಡ ವಸೂಲಾಗಿದೆ. ಸದ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ದಂಡ ಸಂಗ್ರಹ ಮಾಡಲಾಗ್ತಿದೆ.
ದಾಖಲಾದ ಕೇಸ್​ಗಳ ವಿವರ
ಹೆಲ್ಮೆಟ್ ರಹಿತ ಚಾಲನೆ- 18,319 ಕೇಸ್​ಗಳು
ಸಿಗ್ನಲ್ ಜಂಪ್- 5,967 ಕೇಸ್​ಗಳು
ನೋ ಎಂಟ್ರಿ- 2,684 ಕೇಸ್​ಗಳು ದಾಖಲಾಗಿವೆ.

- Advertisement -

Related news

error: Content is protected !!