- Advertisement -
- Advertisement -
ಉಡುಪಿ: ತಾಳೆ ಮರದಲ್ಲಿ ಶೇಂದಿ ತೆಗೆಯಲು ಹೋಗಿ ಯುವಕನೊರ್ವ ಮೂರ್ಛೆ ಹೋಗಿ ಸುಮಾರು ಎರಡು ಗಂಟೆ ಕಾಲವನ್ನು ಮರದಲ್ಲೇ ಕಳೆದಿರುವ ಘಟನೆ ಕಾರ್ಕಳದ ಬೆಳ್ಮಣ್ ಸಮೀಪದ ಕಡಂದಲೆಯಲ್ಲಿ ನಡೆದಿದೆ.ಸಂತೋಷ್ ಎಂಬ ಯುವಕ ಮಂಗಳವಾರ ಬೆಳಗ್ಗೆ ಶೇಂದಿ ತೆಗೆಯಲೆಂದು ತಾಳೆ ಮರ ಹತ್ತಿದ್ದ. ಇದೇ ಸಮಯದಲ್ಲಿ ಆತ ಮೂರ್ಛೆ ಹೋಗಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ಮರದಲ್ಲೇ ಕಳೆದಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಹಗ್ಗಕಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತೋಷ್ರನ್ನು ರಕ್ಷಿಸಿದ್ದಾರೆ. ಸುಧಾಕರ ಸಾಲಿಯಾನ್, ಅಶೋಕ, ದಿನೇಶ್, ನಾರಾಯಣ ಎಂಬುವರು ಅಗ್ನಿಶಾಮಕ ಸಿಬ್ಬಂದಿಗೆ ಸಾಥ್ ನೀಡಿ ಯುವಕನನ್ನು ರಕ್ಷಿಸಿದ್ದಾರೆ.ಮರದಿಂದ ಕೆಳಗಿಳಿಸಿದ ಕೊಂಚ ಹೊತ್ತಿನಲ್ಲೇ ಸಂತೋಷ ಎಚ್ಚರಗೊಂಡಿದ್ದಾರೆ. ಅದೃಷ್ಟವಶಾತ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -