Saturday, June 28, 2025
spot_imgspot_img
spot_imgspot_img

ಕಾರಿನ ಮೇಲೆ ಮಗುಚಿ ಬಿದ್ದ ಟ್ರಕ್; 9 ಮಂದಿ ಸಾವು, ಇಬ್ಬರಿಗೆ ಗಾಯ..!

- Advertisement -
- Advertisement -

ಭೋಪಾಲ್: ಸಿಮೆಂಟ್ ಸಾಗಿಸಿತ್ತಿದ್ದ ಟ್ರಕ್ ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ಮೃತಪಟ್ಟು, ಇಬ್ಬರಿಗೆ ಗಾಯವಾದ ಘಟನೆ ಮಧ್ಯಪ್ರದೇಶದ ಝಬುವಾದಲ್ಲಿ ನಡೆದಿದೆ.

ಝಬುವಾ ಜಿಲ್ಲೆಯ ಮೇಘನಗರ ತಹಸಿಲ್‌ನ ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ಬೆಳಗಿನ ಜಾವ 2.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮೇಘನಗರದ ಶಿವಗಢ ಮಹುದಾ ಗ್ರಾಮದ ನಿವಾಸಿಗಳಾದ ಮುಖೇಶ್ (40), ಸಾವ್ಲಿ (35), ವಿನೋದ್ (16), ಪಾಯಲ್ (12), ಮಾಧಿ (38), ವಿಜಯ್ ಭರು ಬಮಾನಿಯಾ (14), ಕಾಂತಾ (14), ರಾಗಿಣಿ (9), ಮತ್ತು ಅಕಾಲಿ (35) ಸಾವನ್ನಪ್ಪಿದ್ದಾರೆ. ಪಾಯಲ್ ಸೋಮ್ಲಾ (19) ಮತ್ತು ಆಶು (5) ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ತಾತ್ಕಾಲಿಕ ರಸ್ತೆ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ದಾಟುತ್ತಿದ್ದ ಟ್ರಕ್ ಸಮತೋಲನ ಕಳೆದುಕೊಂಡು ಕಾರಿನ ಮೇಲೆ ಮಗುಚಿ ಬಿದ್ದಿದೆ. ಅಪಘಾತ ಸಂಭವಿಸಿದಾಗ ಅವರು ಮದುವೆ ಸಮಾರಂಭದಿಂದ ಮನೆಗೆ ಹಿಂತಿರುಗುತ್ತಿದ್ದರು. 9 ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಅದು ಟ್ರಕ್‌ನ ಭಾರಕ್ಕೆ ನಜ್ಜುಗುಜ್ಜಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!