Tuesday, July 21, 2026
spot_imgspot_img
spot_imgspot_img

ಇರಾನ್ ಮೇಲಿನ ದಾಳಿಯ ಹೊಣೆಯನ್ನು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮೇಲೆ ಹೊರಿಸಿದ ಟ್ರಂಪ್!

- Advertisement -
- Advertisement -

ವಾಶಿಂಗ್ಟನ್: ಮಧ್ಯಪ್ರಾಚ್ಯ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಯುದ್ಧದ ಕುರಿತು ಟೀಕೆಗಳು ಹೆಚ್ಚಿದ ಬೆನ್ನಲ್ಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ದಾಳಿ ನಿರ್ಧಾರದ ಹೊಣೆಗಾರಿಕೆಯನ್ನು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮೇಲೆ ಹೊರಿಸಿದ್ದಾರೆ.

ಮೆಂಫಿಸ್ ಸೇಫ್ ಟಾಸ್ಕ್ ಫೋರ್ಸ್‌ನ ಸಾರ್ವಜನಿಕ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, ಪೀಟ್ ಹೆಗ್ಸೆತ್ ಇರಾನ್ ವಿರುದ್ಧ ಮಿಲಿಟರಿ ಕ್ರಮಕ್ಕೆ ಒತ್ತಾಯಿಸಿದ ಮೊದಲ ಅಧಿಕಾರಿ ಎಂದು ಹೇಳಿದ್ದಾರೆ.

“ಪೀಟ್, ನೀವು ಮೊದಲು ಮಾತನಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ, ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದನ್ನು ಬಿಡಲು ಸಾಧ್ಯವಿಲ್ಲ. ಹಾಗಾಗಿ ನಾವು ಅದನ್ನು (ಮಿಲಿಟರಿ ಕಾರ್ಯಾಚರಣೆ) ಮಾಡೋಣ ಎಂದು ನೀವು ಹೇಳಿದ್ದೀರಿ” ಎಂದು ಪಕ್ಕದಲ್ಲೇ ಇದ್ದ ಪೀಟ್ ಹೆಗೆತ್ಸ್ ರತ್ತ ನೋಡುತ್ತಾ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಗಳು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಯಾರು ಪ್ರತಿಪಾದಿಸಿದರು ಎಂಬುದರ ಕುರಿತು ಅಮೆರಿಕದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೈನಿಕ ಕಾರ್ಯಾಚರಣೆಗೆ ಅನುಮತಿ ನೀಡುವ ಮೊದಲು ಹಲವು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಟ್ರಂಪ್‌ ಹೇಳಿದ್ದಾರೆ. “ನಾನು ಪೀಟ್‌ಗೆ ಕರೆ ಮಾಡಿದೆ. ನಾನು ಜನರಲ್ ಕೇನ್ ಅವರಿಗೆ ಕರೆ ಮಾಡಿದೆ. ನಾನು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಕರೆ ಮಾಡಿದೆ. ಇರಾನ್‌ನಿಂದ ಹೆಚ್ಚುತ್ತಿರುವ ಅಪಾಯದ ಬಗ್ಗೆ ಚರ್ಚೆಯನ್ನು ನಡೆಸಿದ್ದೆ” ಎಂದು ಟ್ರಂಪ್‌ ಹೇಳಿದ್ದಾರೆ.

- Advertisement -

Related news

error: Content is protected !!