Friday, March 21, 2025
spot_imgspot_img
spot_imgspot_img

ಭಾರತೀಯ ವಲಸಿಗರನ್ನು ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್

- Advertisement -
- Advertisement -

ಅಮೆರಿಕ: ಭಾರತೀಯ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ನೂತನ ಅಧ್ಯಕ್ಷರಾಗಿ ಡೊನಾಲ್ಡ್​ ಟ್ರಂಪ್ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ 500 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದರು.

ಇತ್ತೀಚೆಗಷ್ಟೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್‌ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಈ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು, ಇದೀಗ ಅದರ ಎರಡನೇ ಭಾಗದ ಕಾರ್ಯಾಚರಣೆ ನಡೆಯುತ್ತಿದೆ.

ಅಕ್ರಮ ವಲಸಿಗರನ್ನು ಹೊತ್ತ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ -17 ವಿಮಾನವು ವಲಸಿಗರೊಂದಿಗೆ ಭಾರತಕ್ಕೆ ಹೊರಟಿತ್ತು ಆದರೆ ಕನಿಷ್ಠ 24 ಗಂಟೆಗಳಾದರೂ ಅದು ತಲುಪಲಿಲ್ಲ ಎಂದು ಹೇಳಿದರು. ಅಮೆರಿಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದರು.

ಪ್ಯೂ ಸಂಶೋಧನಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ , ಇದು ಮೆಕ್ಸಿಕೊ ಮತ್ತು ಎಲ್ ಸಾಲ್ವಡಾರ್ ನಂತರ ಅನಧಿಕೃತ ವಲಸಿಗರ ಮೂರನೇ ಅತಿದೊಡ್ಡ ಜನಸಂಖ್ಯೆಯಾಗಿದೆ.

- Advertisement -

Related news

error: Content is protected !!