Sunday, May 19, 2024
spot_imgspot_img
spot_imgspot_img

ತುಳುನಾಡಿನಲ್ಲಿ ಸದ್ದು ಮಾಡ್ತಿದೆ #EducationInTulu ..ಟ್ವೀಟ್ ಅಭಿಯಾನ.

- Advertisement -G L Acharya panikkar
- Advertisement -

ಮಂಗಳೂರು: ಲಕ್ಷಾಂತರ ಮಂದಿಯ ಮಾತೃಭಾಷೆಯಾಗಿಯಷ್ಟೇ ಉಳಿದಿರುವ ತುಳು ಭಾಷೆಗೆ ಇನ್ನೂ ಯಾವುದೇ ರೀತಿಯ ಸ್ಥಾನಮಾನ ದೊರೆತಿಲ್ಲ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯ, ಹೊರ ದೇಶಗಳಲ್ಲಿಯೂ ತಮ್ಮ ನೆಲೆಯನ್ನು ಕಂಡುಕೊಂಡಿರುವ ತುಳುವರು ಅಲ್ಲೂ ತಮ್ಮ ತಾಯ್ನೆಲದ ಕಂಪನ್ನು ಸೂಸಿದ್ದಾರೆ. ಇದೀಗ ತುಳುನಾಡಿನ ಮಕ್ಕಳಿಗೆ ತುಳುವಿನಲ್ಲಿಯೇ ಶಿಕ್ಷಣ ಸಿಗಬೇಕು ಎಂಬ ಅಭಿಯಾನವೊಂದನ್ನು ನಡೆಸಲು ತುಳುವರು ತೀರ್ಮಾನಿಸಿದ್ದಾರೆ.

ಸದ್ಯಕ್ಕೆ ಕೇಂದ್ರ ಸರಕಾರವು ಜಾರಿಗೆ ತರಲು ನಿರ್ಧರಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ 5 ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಕೊಡಬೇಕೆಂಬ ನಿಯಮವಿದ್ದು.ತುಳು ಭಾಷೆಯಲ್ಲಿ ಶಿಕ್ಷಣ , ತುಳುನಾಡಿನ ಮಕ್ಕಳಿಗೆ ದೊರೆಯ ಬೇಕಾಗಿದೆ. ಇದರ ಅನ್ವಯ ತುಳುನಾಡಿನ ಮಕ್ಕಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ನಿಯಮ ಸೇರಿಸಬೇಕು ಎಂಬುದು ಕರಾವಳಿ ಜನರ ಮಹತ್ತರವಾದ ಆಶಯವಾಗಿದೆ.

#EducationInTulu

Posted by Jaii Tulunad on Thursday, 13 August 2020

ಕರ್ನಾಟಕದಲ್ಲಿ ಕನ್ನಡದ ನಂತರ ಅತೀ ಹೆಚ್ಚಾಗಿ ಬಳಸಲ್ಪಡುವ ತುಳು ಭಾಷೆಗೆ ಇನ್ನೂ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿಲ್ಲ ಅನ್ನುವ ಕೊರಗು ತುಳುವರದ್ದು. ಇದಕ್ಕಾಗಿ ಕಳೆದ ಹಲವು ವರ್ಷಗಳಿಂದ ಅನೇಕ ಹೋರಾಟಗಳು, ಅಭಿಯಾನಗಳು ನಡೆಯುತ್ತಾ ಬಂದಿವೆ. ಇದಿಗ ಮತ್ತೊಮ್ಮೆ ತುಳು ಭಾಷೆಗೆ ಸಾಂವಿಧಾನಿಕವಾಗಿ ಸಿಗಬೇಕಾದ ಅರ್ಹತೆ ಮತ್ತು ಸ್ಥಾನಮಾನಗಳು ಸಿಗಬೇಕು ಎನ್ನುವ ಕೂಗು ಎದ್ದಿದ್ದು, ಇದೇ ಆಗಸ್ಟ್ 16ರಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ನಡೆಸಲು ತುಳುವರು ನಿರ್ಧರಿಸಿದ್ದಾರೆ.

ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡಬೇಕಾಗಿದೆ.ಈ ಹಿನ್ನೆಲೆಯಲ್ಲಿ  ಆಗಸ್ಟ್ 16ನೇ ತಾರೀಕಿನಂದು ಜೈ ತುಳುನಾಡ್ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಟ್ವೀಟ್ ಅಭಿಯಾನದ ನೇತೃತ್ವ ವಹಿಸಿಕೊಂಡಿದೆ. ಅಲ್ಲದೆ ಈಗಾಗಲೇ ಜನರಲ್ಲಿ ಈ ಬಗ್ಗೆ ಜಾಗೃತಿ ಕೂಡ ಮೂಡಿಸಲು ಆರಂಭಿಸಿದೆ. 

ತುಳುನಾಡಿನ ಮಕ್ಕಳಿಗೆ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗ್ಗೆ ಮನವಿ ಮಾಡಬೇಕಾಗಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯುವ ಅಗತ್ಯತೆ ಇದೆ. ಹೀಗಾಗಿ ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಎಚ್ಚರಿಸಬೇಕಾಗಿದೆ.

- Advertisement -

Related news

error: Content is protected !!