Sunday, June 14, 2026
spot_imgspot_img
spot_imgspot_img

ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆ

- Advertisement -
- Advertisement -

ವಿಟ್ಲ: ಮಹಿಳೆಯೋರ್ವರು ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡ್ ಎಂಬಲ್ಲಿ ನಡೆದಿದೆ.

ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡ್ ನಿವಾಸಿ ಸುಶೀಲಾ(60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಸುಶೀಲಾ ಅವರ ಪತಿ ಮೂರು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಮೃತಪಟ್ಟಿದ್ದರು‌. ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಅವರು ಇಂದು ತನ್ನ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!