Saturday, May 4, 2024
spot_imgspot_img
spot_imgspot_img

ತುಳುನಾಡ ಜವನೆರ್ ಬೆಂಗಳೂರು (ರಿ.) ತುಳುನಾಡ್ ಟ್ರೋಫಿ – 2024

- Advertisement -G L Acharya panikkar
- Advertisement -

ತುಳುನಾಡ ಜವನೆರ್ ಬೆಂಗಳೂರು(ರಿ) ಆಶ್ರಯದಲ್ಲಿ ಭಾಷೆ, ಕ್ರೀಡೆ, ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ತುಳುನಾಡ್ ಟ್ರೋಫಿ – 2024 ಅದ್ದೂರಿಯಾಗಿ ನಡೆಯಿತು.

ತಾವರೆಕೆರೆ ಆರ್ ಎನ್ ಎಸ್ ವಿದ್ಯಾನಿಕೇತನ 2 ನಲ್ಲಿ ಆಯೋಜಿಸಲ್ಪಟ್ಟಿದ್ದ TJB ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು ಬೆಂಗಳೂರಿನಲ್ಲಿರುವ ತುಳುನಾಡಿನ ಯುವಕರು ಸಂಭ್ರಮ ಪಟ್ಟರು.

ಪ್ರಥಮ ಬಹುಮಾನವನ್ನು ತುಳುನಾಡ ರಂಗ್ ರಾಜಾಜಿನಗರ ತನ್ನದಾಗಿಸಿದರೆ, ತುಳುನಾಡ ತುಡರ್ ಯಶವಂತಪುರ ದ್ವಿತೀಯ ವಿಜೇತ ತಂಡವಾಯಿತು. ತುಳುನಾಡ ಬಿರ್ಸೆರ್ ವೈಟ್ ಫೀಲ್ಡ್ ಹಾಗೂ ತುಳುನಾಡ ಬೊಲ್ಪು ಬನ್ನೇರುಘಟ್ಟ ತೃತೀಯ ಹಾಗೂ ಚತುರ್ಥ ಬಹುಮಾನ ಪಡೆಕೊಂಡ ತಂಡಗಳಾದವು‌.

ಇವುಗಳ ಜೊತೆಗೆ ತಂಡಗಳಾದ ತುಳುನಾಡ ಕೇಸರಿ ಯಲಹಂಕ, ತುಳುನಾಡ ಕುರಲ್ ಕೆಂಗೇರಿ, ತುಳುನಾಡ ಸೂರ್ಯಚಂದ್ರೆರ್ ವಿಜಯನಗರ, ತುಳುನಾಡ ಬೊಳ್ಳಿ ಅತ್ತಿಗುಪ್ಪೆ, ತುಳುನಾಡ ಪುರ್ಪ ಎಲೆಕ್ಟ್ರಾನಿಕ್ ಸಿಟಿ,ತುಳುನಾಡ ಸಿರಿ ಜೆಪಿನಗರ, ತುಳುನಾಡ ದಂಡ್ ಪೀಣ್ಯ ತಂಡಗಳು ರಾಜಧಾನಿಯ ವಿವಿಧ ಭಾಗಗಳಲ್ಲಿರುವ ತುಳುವರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವು.

ಸೇವಾ ಚಟುವಟಿಕೆಯಾಗಿ ಬೆಂಗಳೂರಿನ ಎರಡು ಆಶ್ರಮಗಳಿಗೆ ವಸ್ತ್ರದಾನ ಹಾಗೂ ಅಕ್ಕಿ ಸಮರ್ಪಣೆ ನಡೆಯಿತು. ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಬೇಕು ಜೊತೆಗೆ ತುಳುವಿಗೆ ಪ್ರಾಧಾನ್ಯತೆ ನೀಡಬೇಕೆನ್ನುವ ನಿಟ್ಟಿನಲ್ಲಿ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾ ನರೇಂದ್ರ ಮೋದೀಜಿಯವರಿಗೆ ಪತ್ರ ಮುಖೇನ ಮನವಿಯ ಮುಖೇನ 5000 ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ತುಳುನಾಡ ದ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪೋಜ್ವಲನೆಯ ಮೂಲಕ ಸಂಸ್ಥೆಯ ಮಾರ್ಗದರ್ಶಕರಾದ ಸಂದೀಪ್ ಹೆಗ್ಡೆ ಹಾಗು ಸದಾನಂದ ಶೆಟ್ಟಿ ಚಾಲನೆ ನೀಡಿದರು. ದುರ್ಗಾಪ್ರಸಾದ್ ಕಡೆಶಿವಾಲಯ ಕಾರ್ಯಕ್ರಮ ನಿರೂಪಿಸಿ, ಸಂಚಾಲಕರಾದ ಶ್ರುತಿನ್ ಕಡೇಶಿವಾಲಯ ಪ್ರಸ್ತಾವನೆಯ ಜೊತೆಗೆ ಅಭಿನಂದನೆಗೈದರು.

ಸಂಸ್ಥೆಯ ಅಧ್ಯಕ್ಷ ಮಹೇಶ್ ಬೈಲೂರು, ಕ್ರೀಡಾ ಕಾರ್ಯದರ್ಶಿ ಅರ್ಜುನ್ ಎರ್ಮಾಳ್, ಕೋಶಾಧಿಕಾರಿ ಅಮಿತ್‌, ಸಹಸಂಚಾಲಕ ಶಶಿ ಕಾವೂರ್ ಉಪಾಧ್ಯಕ್ಷ ಹರಿಪ್ರಸಾದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಗೆ ಎಲ್ಲಾ ಆಟಗಾರರು ಮೈದಾನ ಹಾಗೂ ಶಾಲಾ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚ ಭಾರತ ಅಭಿಯಾನದಲ್ಲಿ ಪಾಲ್ಗೊಂಡರು‌.

- Advertisement -

Related news

error: Content is protected !!