Monday, June 8, 2026
spot_imgspot_img
spot_imgspot_img

ಫೋಟೋ ತೆಗೆಯುವ ನೆಪ ಹೇಳಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ!

- Advertisement -
- Advertisement -

ತುಮಕೂರು: 10 ನೇ ತರಗತಿ ಬಾಲಕಿ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಅಮಾನವೀಯ ಘಟನೆ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಓರ್ವ 35 ವರ್ಷದ ಆರೋಪಿ ಸಿಕ್ಕಿಬಿದ್ದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದಕ್ಕೆ ಮಹಿಳೆಯೂ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಅದಕ್ಕೆ ತಕ್ಕಂತೆಯೇ ಇಲ್ಲೊಂದು ಕೃತ್ಯ ನಡೆದಿದೆ. ಗ್ರಾಮದ ಮಹಿಳೆಯೊಬ್ಬಳು ಬಾಲಕಿಯ ಮನೆಗೆ ಬಂದು ಎಲ್ಐಸಿ ಬಾಂಡ್ ಫೋಟೋ ತೆಗೆದು ವಾಟ್ಸಾಪ್ ಮಾಡಬೇಕು. ಅದು ಹೇಗೆ ಎಂದು ತೋರಿಸಿಕೊಡು ಬಾ ಎಂದು ಕರೆದುಕೊಂಡು ಹೋಗಿದ್ದಾಳೆ.

ಆ ಬಳಿಕ ಗ್ರಾಮದ ಅಜ್ಜಿಯೊಬ್ಬರ ಮನೆಗೆ ಕರೆದುಕೊಂಡು ಹೋಗಿ ಏಕಾಏಕಿ ಬಾಲಕಿಯನ್ನು ಒಳಗೆ ಬಿಟ್ಟು ಬಾಗಿಲು ಹಾಕಿದ್ದಾಳೆ. ಬಾಲಕಿ ಒಳಗೆ ಹೋದ ಮೇಲೆ ದುಷ್ಟರಿಬ್ಬರು ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುವ ಬೆದರಿಕೆ ಹಾಕಿ ಕಳಿಸಿದ್ದಾರೆ ಎನ್ನಲಾಗಿದೆ.

ಪೋಷಕರು ಕೂಲಿಗೆ ತೆರಳಿದ್ದಾಗ ಘಟನೆ ನಡೆದಿದ್ದು, ಮನೆಯಲ್ಲಿ ಅಜ್ಜಿ ಮಾತ್ರ ಇದ್ದಳು ಎನ್ನಲಾಗಿದೆ.
ಈ ಘಟನೆಯ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

- Advertisement -

Related news

error: Content is protected !!