Monday, July 27, 2026
spot_imgspot_img
spot_imgspot_img

ತುಮಕೂರು: ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಅರ್ಚಕ

- Advertisement -
- Advertisement -

ತುಮಕೂರು: ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಅರ್ಚಕನೊಬ್ಬ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಗ್ರಾಮದ ಮಲ್ಲೆಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಶಿವಣ್ಣ (40) ಎಂದು ಗುರುತಿಸಲಾಗಿದೆ. ಅವರು ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ್ (05) ಕತ್ತುಹಿಸುಕಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಣ್ಣರ ಪತ್ನಿ ಕಾವ್ಯ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಪೊಲೀಸರಿಗೆ ದೂರು ಕೊಟ್ಟು ಕಾವ್ಯಗಳನ್ನು ಹುಡುಕಿ ತರಲಾಗಿತ್ತು. ಮನೆಗೆ ವಾಪಸ್ ಬಂದ ಪತ್ನಿ ಮನೆಯಲಿದ್ದ ಹಣ, ಒಡವೆ ದೋಚಿಕೊಂಡು ಮತ್ತೊಮ್ಮೆ ಪರಾರಿಯಾಗಿದ್ದಾಳೆ. ಇದರಿಂದ ಮನನೊಂದ ಶಿವಣ್ಣ ಮಕ್ಕಳನ್ನು ಕೊಂದು ನೇಣಿಗೆ ಕೊರಳೊಡ್ಡಿದ್ದಾರೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಬೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!