Sunday, May 19, 2024
spot_imgspot_img
spot_imgspot_img

ಕಾಸರಗೋಡು: ಟಿವಿ ಮೈಮೇಲೆ ಬಿದ್ದು ಎರಡು ವರ್ಷದ ಮಗು ಮೃತ್ಯು!

- Advertisement -G L Acharya panikkar
- Advertisement -

ಕಾಸರಗೋಡು: ಟಿವಿ ಮೈಮೇಲೆ ಬಿದ್ದು ಎರಡು ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಬೋವಿಕ್ಕಾನದಲ್ಲಿ ನಡೆದಿದೆ.

ತೆಕ್ಕಿಲ್ ಉಕ್ರಂಪಾಡಿಯ ನಿಸಾರ್-ಫಾಯಿಝ ದಂಪತಿಯ ಏಕೈಕ ಪುತ್ರ ಮುಹಮ್ಮದ್ ಶಾಕಿರ್(2) ಮೃತಪಟ್ಟ ಮಗು. ಬೋವಿಕ್ಕಾನದ ಶಾಕಿರ್ ನ ಅಜ್ಜಿ ಮನೆಯಲ್ಲಿ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗು ಟಿವಿಯ ಕೇಬಲ್ ವಯರ್ ಎಳೆದ ಸಂದರ್ಭದಲ್ಲಿ ಸ್ಟ್ಯಾಂಡ್ ಸಹಿತ ಟಿವಿ ಮೈಮೇಲೆ ಬಿದ್ದಿದೆಯೆನ್ನಲಾಗಿದೆ.

ಶಬ್ದ ಕೇಳಿ ಮನೆಯವರು ಧಾವಿಸಿ ಬಂದಾಗ ಶಾಕಿರ್ ನ ಮೇಲೆ ಟಿವಿ ಹಾಗೂ ಸ್ಟ್ಯಾಂಡ್ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಗುವನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು ಎನ್ನಲಾಗಿದೆ.

- Advertisement -

Related news

error: Content is protected !!